ಉದಯವಾಹಿನಿ, ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನ ಮೆಗಾ ಹರಾಜಿಗೆ (WPL 2026 Mega Auction) ವೇದಿಕೆ ಸಜ್ಜಾಗಿದೆ. ನವೆಂಬರ್‌ 27ರಂದು ನಡೆಯಲಿರುವ ಈ ಮೆಗಾ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಐದು ಫ್ರಾಂಚೈಸಿಗಳು ಹರಾಜಿನ ನಿಯಮದಂತೆ 50 ಭಾರತೀಯ ಆಟಗಾರ್ತಿಯರು ಮತ್ತು 23 ವಿದೇಶಿಯರು ಸೇರಿದಂತೆ 73 ಮಂದಿ ಆಟಗಾರ್ತಿಯರನ್ನು ಖರೀದಿಸಲು ಎದುರು ನೋಡುತ್ತಿವೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್‌ನಲ್ಲಿ ತೀವ್ರ ಪೈಪೋಟಿ ಉಂಟಾಗಬಹುದು. ಭಾರತ ಮಹಿಳಾ ತಂಡ ವಿಶ್ವಕಪ್‌ ಮುಡಿಗೇರಿಸಿಕೊಂಡ ಹಿನ್ನೆಲೆ ಫ್ರಾಂಚೈಸಿಗಳ ಕಣ್ಣು ಸ್ವದೇಶಿ ಆಟಗಾರರ ಮೇಲೆ ಇದೆ. ವಿಶ್ವಕಪ್‌ ಗೆಲುವಿನ ಬಳಿಕ ಯುಪಿ ವಾರಿಯರ್ಸ್‌ ಬಿಡುಗಡೆ ಮಾಡಿದ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರ ಸ್ಥಿರತೆಗೆ ಫ್ರಾಂಚೈಸಿಗಳ ನಡುವೆ ಪೈಪೋಟಿಯ ಬಿಡ್‌ ಉಂಟಾಗುವ ಸಾಧ್ಯತೆಯಿದೆ.
ಹರ್ಲೀನ್‌ ಡಿಯೋಲ್‌: ಇವರು ಕಳೆದ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಭಾಗವಾಗಿದ್ದರು. ಆಕ್ರಮಣಕಾರಿ ಬಲಗೈ ಬ್ಯಾಟರ್‌ ಮತ್ತು ಸ್ಪಿನ್‌ ಬೌಲಿಂಗ್‌ ಹೊಂದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸುವ ಇವರು ಕಳೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜಯಂಟ್ಸ್‌ ತಂಡದ ಭಾಗವಾಗಿದ್ದರು.

 

Leave a Reply

Your email address will not be published. Required fields are marked *

error: Content is protected !!