ಉದಯವಾಹಿನಿ, ಜೊಹಾನ್ಸ್ ಬರ್ಗ್ : ಜಿ20 ಗುಂಪಿನಿಂದ ದಕ್ಷಿಣ ಆಫ್ರಿಕಾವನ್ನು ತೆಗೆದು ಹಾಕಿ ಆ ಜಾಗದಲ್ಲಿ ಮಧ್ಯ ಯುರೋಪ್ ನ ದೇಶವನ್ನು ಸ್ಥಾಪಿಸಲು ಅಮೆರಿಕ ಒತ್ತಡ ಹೇರುತ್ತಿದೆ ಎಂದು ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಹೇಳಿದ್ದಾರೆ.
2026ರ ಸಾಲಿನಲ್ಲಿ ಜಿ20 ಅಧ್ಯಕ್ಷತೆಯನ್ನು ಅಮೆರಿಕ ವಹಿಸಿದ ಬಳಿಕ ಜಿ20 ಸಭೆಗಳಿಂದ ದಕ್ಷಿಣ ಆಫ್ರಿಕಾವನ್ನು ಹೊರಗಿಟ್ಟಿರುವುದಾಗಿ ಅಮೆರಿಕ ಸೂಚಿಸುವ ನಿರೀಕ್ಷೆಯಿದೆ ಎಂದು ದಕ್ಷಿಣ ಆಫ್ರಿಕಾ ಸರಕಾರದ ಮೂಲಗಳು ಹೇಳಿವೆ. ಒಂದು ವೇಳೆ ಈ ಬೆಳವಣಿಗೆ ನಡೆದರೆ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಆಳಗೊಳ್ಳಲಿದೆ ಎಂದು `ಬ್ಲೂಮ್‌ಬರ್ಗ್’ ವರದಿ ಮಾಡಿದೆ. ಜಿ20ರ ಗುಂಪಿನಿಂದ ದಕ್ಷಿಣ ಆಫ್ರಿಕಾವನ್ನು ತೆಗೆದು ಹಾಕಿ ಟ್ರಂಪ್ ಆಡಳಿತಕ್ಕೆ ನಿಕಟವಾಗಿರುವ ಮಧ್ಯ ಯುರೋಪ್ ನ ಹೊಸ ಸದಸ್ಯನನ್ನು ಆ ಸ್ಥಾನಕ್ಕೆ ನೇಮಿಸುವ ಉದ್ದೇಶವಿದೆ. ಮುಂದಿನ ವರ್ಷ ನಡೆಯಲಿರುವ ಜಿ20 ಗುಂಪಿನ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾ ಅಧಿಕಾರಿಗಳಿಗೆ ವೀಸಾವನ್ನು ತಡೆಹಿಡಿಯುವುದು ಈ ನಿರ್ಧಾರದ ಮುಂದಿನ ಹಂತವಾಗಿರಬಹುದು ಎಂದು ವರದಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!