ಉದಯವಾಹಿನಿ,ಸಿರವಾರ: ಬಹುಮಾನ ಗೆಲ್ಲವುದು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ ಎಂದು ಡಾ.ಶೋಭಾ ಕಂದಕೂರು ಹೇಳಿದರು. ಅವರಿಂದು ಪಟ್ಟಣದ ಸಿರವಾರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಜನ್ಮ ದಿನದ ಪ್ರಯುಕ್ತ ಕೆಎಸ್ಎನ್ ಅಭಿಮಾನಿ ಹಾಗೂ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ಮಾತನಾಡಿದರು. ಮಾಜಿ ಶಾಸಕರಾದ ಕೆ.ಶಿವನಗೌಡ ನಾಯಕ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಇಂತಹ ಸ್ಪರ್ಧೆ ಆಯೋಜಿಸಿರುವುದು ಹೆಮ್ಮೆಯ ವಿಷಯ. ಮಹಿಳೆಯರಿಗೆ ಬಹುಮಾನ ಮುಖ್ಯವಲ್ಲ, ಪಾಲ್ಗೊಳ್ಳಲು ಇಂತಹ ವೇದಿಕೆ ಸಿಗುವುದು ಅಪರೂಪ ಎಂದು ಹೇಳಿದರು.
ರಂಗೋಲಿ ನಮ್ಮ ಸಂಸ್ಕೃತಿ ಅದನ್ನು ಉಳಿಸಬೇಕು. ರಂಗೋಲಿ ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ ಎಂದರು. ಈ ಸ್ಪರ್ಧೆಯಲ್ಲಿ ರಾಯಚೂರು, ದೇವದುರ್ಗ, ಸಿರವಾರ, ಜಾಲಹಳ್ಳಿ, ಮಾನ್ವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆಎಸ್ಎನ್ ಅಭಿಮಾನಿ ಬಳಗದ ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ನರಸಿಂಹರಾವ್ ಕುಲಕರ್ಣಿ, ಮೌಲಸಾಬ್ ಗಣದಿನ್ನಿ, ಪ.ಪಂ.ಸದಸ್ಯರಾದ ಚಂದಮ್ಮ, ಲಕ್ಷ್ಮೀ ಆದೆಪ್ಪ , ಕೃಷ್ಣ ನಾಯಕ, ಸುಧಾಬಾಯಿ, ಮಂಜುಳಾ, ವಿಜಯಲಕ್ಷ್ಮಿ ಕುಲಕರ್ಣಿ, ಕೆಎಸ್ಎನ್ ಅಭಿಮಾನಿ ಬಳಗದ ಅಧ್ಯಕ್ಷ ಉಮಾಶಂಕರ ಜೇಗರಕಲ್ ಸೇರಿದಂತೆ ಮಹಿಳೆಯರು, ಯುವತಿಯರು ಅನೇಕರು ಇದ್ದರು.
