ಉದಯವಾಹಿನಿ, ಶ್ರೀನಗರ: ಆಪರೇಷನ್ ಸಿಂಧೂರ್‌ನಿಂದ ಕಂಗೆಟ್ಟ ಪಾಕಿಸ್ತಾನ ಸುಮಾರು 72 ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದೆ ಎಂದು ಬಿಎಸ್‌ಎಫ್ ಡಿಐಜಿ ವಿಕ್ರಮ್ ಕುನ್ವರ್ ತಿಳಿಸಿದ್ದಾರೆ.
ಶ್ರೀನಗರ: ಆಪರೇಷನ್ ಸಿಂಧೂರ್‌ನಿಂದ ಕಂಗೆಟ್ಟ ಪಾಕಿಸ್ತಾನ ಸುಮಾರು 72 ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದೆ ಎಂದು ಬಿಎಸ್‌ಎಫ್ (BSF) ಡಿಐಜಿ ವಿಕ್ರಮ್ ಕುನ್ವರ್ ತಿಳಿಸಿದ್ದಾರೆ.
ವಿಕ್ರಮ್ ಕುನ್ವರ್, ಜಮ್ಮು ಗಡಿನಾಡಿನ ಬಿಎಸ್‌ಎಫ್ ಐಜಿ ಶಶಾಂಕ್ ಆನಂದ್ ಮತ್ತು ಡಿಐಜಿ ಕುಲ್ವಂತ್ ರಾಯ್ ಶರ್ಮಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ 2025 ರಲ್ಲಿ ಪಡೆಯ ಸಾಧನೆಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಸರ್ಕಾರ ಗಡಿಯಾಚೆಗಿನ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿದರೆ ಶತ್ರುಗಳ ಹುಟ್ಟಡಗಿಸಲು ಸೇನಾ ಪಡೆಗಳು ಸಿದ್ಧವಾಗಿವೆ. ಅದಕ್ಕಾಗಿ ಆಪರೇಷನ್ ಸಿಂಧೂರ್ 2.0ಗೆ ಸಿದ್ಧವಾಗಿದ್ದೇವೆ. ಆದರೆ ಘರ್ಷಣೆಯ ನಂತರ ಕೈಗೊಳ್ಳಲಾದ ಕದನ ವಿರಾಮವನ್ನು ಭದ್ರತಾ ಪಡೆಗಳು ಗೌರವಿಸುತ್ತವೆ ಎಂದಿದ್ದಾರೆ.
