ಉದಯವಾಹಿನಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದೇ ಮೊದಲ ಭಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ಭಾರತಕ್ಕೆ ಆಗಮಿಸಲಿರುವ ಅವರು ಡಿಸೆಂಬರ್ 5ರಂದು ಹಿಂದಿರುಗಲಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಪುಟಿನ್ ಅವರು ಈ ಸಂದರ್ಭದಲ್ಲಿ ದೊಡ್ಡ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಇದರಲ್ಲಿ ಉನ್ನತ ಮಟ್ಟದ ರಕ್ಷಣಾ ಸಹಕಾರ ಮತ್ತು ಹೊಸ ಎಸ್-400 ಕ್ಷಿಪಣಿ ಒಪ್ಪಂದದ ಕಾರ್ಯಸೂಚಿಯು ಇರುವ ಸಾಧ್ಯತೆ ಇದೆ.

ವ್ಲಾಡಿಮಿರ್ ಪುಟಿನ್ ಅವರು 23ನೇ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇವರ ಈ ಭೇಟಿಯು ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತು ಭಾರತದ ಆಪರೇಷನ್ ಸಿಂದೂರ್ ಬಳಿಕ ನಡೆಯುವ ಮೊದಲ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಅವರು ರಕ್ಷಣಾ ಸಹಕಾರ, ಹೊಸ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಒಪ್ಪಂದ ಅಂತಿಮಗೊಳಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಲಿದೆ.
ಭಾರತೀಯ ವಾಯುಪಡೆಗೆ ಎರಡರಿಂದ ಮೂರು ಹೆಚ್ಚುವರಿ ಎಸ್-400 ರೆಜಿಮೆಂಟ್‌ಗಳನ್ನು ಪೂರೈಸುವ ಮಾಸ್ಕೋದ ಪ್ರಸ್ತಾಪವು ಈ ಸಂದರ್ಭದಲ್ಲಿ ಚರ್ಚೆಯಾಗಲಿದೆ. ರಷ್ಯಾದ ಮಿಲಿಟರಿ ಉಪಕರಣಗಳ ಮೇಲಿನ ಅವಲಂಬನೆಯಲ್ಲಿ ಭಾರತದ ಪಾಲು ಹೆಚ್ಚಾಗಿದೆ. ಶೇಕಡಾ 60-70 ರಷ್ಟು ಮಿಲಿಟರಿ ಉಪಕರಣವನ್ನು ಭಾರತ ರಷ್ಯಾದಿಂದ ಆಮದು ಮಾಡಿಕೊಂಡಿದೆ. ಆದರೆ ಕಳೆದ ದಶಕದಿಂದ ರಷ್ಯಾದ ಶಸ್ತ್ರಾಸ್ತ್ರ ಆಮದುಗಳ ಪಾಲು ತೀವ್ರವಾಗಿ ಕುಸಿತಗೊಳ್ಳುತ್ತಿದೆ. ಈ ನಡುವೆಯೂ ಭಾರತದ ರಕ್ಷಣಾ ಸನ್ನದ್ಧತೆಯನ್ನು ರೂಪಿಸುವಲ್ಲಿ ರಷ್ಯಾ ನಿರ್ಣಾಯಕ ಪಾತ್ರವಹಿಸಿದೆ.

Leave a Reply

Your email address will not be published. Required fields are marked *

error: Content is protected !!