ಉದಯವಾಹಿನಿ, ಟರ್ಕಿ: ಮಾನವ ರಹಿತ ಫೈಟರ್ ಜೆಟ್ ಕಿಜಿಲೆಲ್ಮಾವನ್ನು ಟರ್ಕಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ಈ ಮೂಲಕ ಜಾಗತಿಕ ಯುದ್ಧ ವಾಯುಯಾನದಲ್ಲಿ ಇತಿಹಾಸ ನಿರ್ಮಿಸಿದ ಟರ್ಕಿ ಈ ಕ್ಷಿಪಣಿಯನ್ನು ಬಳಸಿಕೊಂಡು ಗಾಳಿಯಲ್ಲಿ ನಿಖರವಾಗಿ ವಿಮಾನವನ್ನು ಗುರಿಯಾಗಿಸಿತ್ತು. ರಾಡಾರ್ ಮಾರ್ಗದರ್ಶನದ ಮೂಲಕ ಕಾರ್ಯ ನಿರ್ವಹಿಸುವ ಈ ಜೆಟ್ ಮಾನವ ರಹಿತ ಯುದ್ಧ ವಿಮಾನಗಳಲ್ಲಿ ಒಂದು ಪ್ರಗತಿಯಾಗಿದೆ. ಸಿನೋಪ್ ಫೈರಿಂಗ್ ಶ್ರೇಣಿಯ ಕರಾವಳಿಯಲ್ಲಿ ಈ ಜೆಟ್ ಅನ್ನು ಟರ್ಕಿ ಪರೀಕ್ಷಿಸಿತ್ತು.
ಅಸೆಲ್ಸನ್‌ನ ಮುರಾದ್ ಏಸಾ ರಾಡಾರ್‌ನಿಂದ ಕಾರ್ಯನಿರ್ವಹಿಸುವ ಫೈಟರ್ ಜೆಟ್ ಕಿಜಿಲೆಲ್ಮಾ ಸ್ವಯಂ ಚಾಲಿತವಾಗಿ ವೈಮಾನಿಕ ಗುರಿಯನ್ನು ನಿಗದಿ ಪಡಿಸಿ ಗಾಳಿಯಲ್ಲಿ ಬಿಯಾಂಡ್ ವಿಷುಯಲ್ ರೇಂಜ್ ಗೋಕ್ಡೋಗನ್ ಕ್ಷಿಪಣಿಯೊಂದಿಗೆ ಸೇರಿ ನಾಶಪಡಿಸಿತು. ಕಿಜಿಲೆಲ್ಮಾವನ್ನು ಟರ್ಕಿಯಲ್ಲೇ ತಯಾರಿಸಲಾಗಿದೆ. ಐದು ಎಫ್-15 ಫೈಟರ್ ಜೆಟ್‌ಗಳೊಂದಿಗೆ ಆಕಾಶದೆತ್ತರಕೆ ಹಾರುತ್ತದೆ. ಕಿಜಿಲೆಲ್ಮಾ ಹೈ-ಸ್ಪೀಡ್ ಜೆಟ್ ನಿಗದಿತ ಗುರಿಯನ್ನು ಸ್ವಯಂ ಚಾಲಿತವಾಗಿ ಮುರಾದ್ ಏಸಾ ರಾಡಾರ್ ಮೂಲಕ ಪತ್ತೆ ಮಾಡಿ ಟ್ರ್ಯಾಕ್ ಮಾಡುತ್ತದೆ. ಅನಂತರ ಅದು ತನ್ನ ರೆಕ್ಕೆಯ ಕೆಳಗೆ ಇರುವ ಗೋಕ್ಡೋಗನ್ ಕ್ಷಿಪಣಿಯನ್ನು ಹಾರಿಸುತ್ತದೆ. ಉಡಾವಣೆಯಾದ ಕ್ಷಿಪಣಿಯು ಗುರಿಯ ಡ್ರೋನ್‌ಗೆ ನೇರವಾಗಿ ಬಡಿಯುತ್ತದೆ. ಕಿಜಿಲೆಲ್ಮಾ ಶತ್ರು ವಿಮಾನಗಳನ್ನು ದೂರದಿಂದಲೇ ಪತ್ತೆ ಮಾಡುತ್ತದೆ. ಅದನ್ನು ನೋಡದೆಯೇ ಗುರಿ ಇಟ್ಟು ಹೊಡೆಯುತ್ತದೆ. ಇದು ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತದೆ.
