ಉದಯವಾಹಿನಿ, 2025ರ ವರ್ಷದ ಆಕ್ಸರ್ಡ್ ಪದವಾಗಿ ‘ರೇಜ್ ಬೇಟ್’ ಅನ್ನು ಆಯ್ಕೆ ಮಾಡಲಾಗಿದೆ. ‘ರೇಜ್ ಬೇಟ್ ಪದದ ಬಳಕೆ
ಹೆಚ್ಚಾಗುತ್ತಿರುವುದು ಆಸ್ಟೈನ್ ವಂಚನೆಯ ಕುಶಲ ತಂತ್ರಗಳ ಬಗ್ಗೆ ಜನರಲ್ಲಿನ ಜಾಗೃತಿಯನ್ನು ಸೂಚಿಸುತ್ತಿದೆ ಎಂದು ಆಕ್ಸರ್ಡ್
ಭಾಷೆಗಳ ಅಧ್ಯಕ್ಷ ಕ್ಯಾಸ್ಪರ್ ಗ್ರಾಥೋಲ್ ತಿಳಿಸಿದ್ದಾರೆ.
2025 ಅನ್ನು ರೂಪಿಸಿದ ಕೆಲವು ಮನಸ್ಥಿತಿಗಳು ಮತ್ತು ಸಂಭಾಷಣೆಗಳನ್ನು ಪ್ರತಿಬಿಂಬಿಸುವ ಪದಗಳನ್ನು ಆಕ್ಸರ್ಡ್ ವ್ಯಾಖ್ಯಾನಿಸುತ್ತದೆ. ಅಂತಹ ಉದ್ದೇಶದಿಂದ ಕೆಲವು ಪದಗಳನ್ನು ಆರಿಸಿಕೊಂಡಿದೆ. ವರ್ಷದ ಇತರ ಎರಡು ಪದಗಳಾದ ‘ಔರಾ ಫಾರ್ಮಿಂಗ್’ ಮತ್ತು ‘ಬಯೋ ಹ್ಯಾಕ್’ ನಡುವೆ ‘ರೇಜ್ ಬೇಟ್’ ಮೊದಲ ಸ್ಥಾನಗಳಿಸಿದೆ.
ಡಿಜಿಟಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಬಳಸುವ ತಂತ್ರವನ್ನು ಈ ಪದ ಉಲ್ಲೇಖಿಸುತ್ತದೆ. ಸಾರ್ವಜನಿಕವಾಗಿ ಮತದಾನದ ನಂತರ ಅಂತಿಮವಾಗಿ ‘ರೇಜ್ ಬೇಟ್ ಆಯ್ಕೆಯಾಗಿದೆ.
ನಿಮ್ಮ ಸಾಮಾಜಿಕ ಮಾಧ್ಯಮದ ಫೀಡ್ ಅನ್ನು ನೋಡುತ್ತಾ ಹೋಗುತ್ತಿದ್ದಂತೆ ನಿಮಗೆ ಕಿರಿಕಿರಿ ಹೆಚ್ಚಾಗುತ್ತದೆಯೆ? ಹಾಗಿದ್ದರೆ, ನೀವು ರೇಜ್ ಬೇಟ್ನ ಸಂತ್ರಸ್ತರಾಗಿದ್ದೀರಿ ಎಂದು ಅರ್ಥ. ಆನ್ನೈನ್ನಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಬಳಸುವ ಕುಶಲ ತಂತ್ರಗಳನ್ನು ವಿವರಿಸುವ ಪದವಿದು. ಕಳೆದ ಒಂದು ವರ್ಷದಲ್ಲಿ ಈ ಪದದ ಬಳಕೆ ಮೂರುಪಟ್ಟು ಹೆಚ್ಚಾಗಿದೆ ಎಂದು ಆಕ್ಸರ್ಡ್ ತಿಳಿಸಿದೆ. ನಿಮಗೆ ‘ರೇಜ್ ಬೇಟ್’ ಪದದ ಅರ್ಥ ಗೊತ್ತಿಲ್ಲದಿದ್ದರೂ ನೀವು ಸಾಮಾಜಿಕ ಮಾಧ್ಯಮದ ಬಳಕೆದಾರರಾಗಿದ್ದಲ್ಲಿ ನಿಮಗೆ ಅದರ ಅನುಭವವಾಗಿರಬಹುದು.
