ಉದಯವಾಹಿನಿ, ಇಸ್ಲಾಮಾಬಾದ್‌: ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಪಾಕಿಸ್ತಾನ ಪ್ರಧಾನಿ ಮಾಜಿ ಇಮ್ರಾನ್‌ ಖಾನ್‌ ಆರೋಗ್ಯದಲ್ಲಿ ಇತ್ತೀಚಿಗೆ ಏರುಪೇರು ಕಾಣಿಸಿಕೊಂಡಿದೆ. ಇದರ ನಡುವೆ ಆತನ ಬೆಂಬಲಿಗರು ಮಂಗಳವಾರ ಒಳಗಿಂದೊಳಗೆ ಇಸ್ಲಾಮಾಬಾದ್‌ ಮತ್ತು ರಾವಲ್ಪಂಡಿ ನಗರಗಳಲ್ಲಿ ಪ್ರತಿಭಟನೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಕಳೆದ ಒಂದು ತಿಂಗಳಿಂದ ಯಾರೊಂದಿಗೂ ಸಂಪರ್ಕ ಹೊಂದಿಲ್ಲ ಎನ್ನಲಾಗುತ್ತಿದೆ. ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷ ಆಯೋಜಿಸಿದ್ದ ಪೂರ್ವನಿಗದಿತ ಯೋಜನೆಗಳಿಗೆ ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ನಗರಗಳಲ್ಲಿ ಸೆಕ್ಷನ್‌ 144 ವಿಧಿಸಿದ್ದಾರೆ. ಇನ್ನು ಖಾನ್‌ ಬಂಧಿಸಲಾಗಿರುವ ರಾವಲ್ಪಂಡಿಯ ಅಡಿಯಾಲಾ ಜೈಲಿನ ಹೊರಗೆ ಮತ್ತು ಇಸ್ಲಾಮಾಬಾದ್‌ ಹೈಕೋರ್ಟ್‌ ಹೊರಗಡೆ ಪ್ರತಿಭಟನೆಗಳು ನಡೆಯಲಿವೆ.ಸತತ ಮೂರು ವಾರಗಳಿಂದಲೂ ಖಾನ್‌ ಇಬ್ಬರು ಪುತ್ರರು, ಪತ್ನಿ ಸೇರಿದಂತೆ ಕುಟುಂಬ ಸದಸ್ಯರು ಪಾಕ್‌ ಪ್ರಧಾನಿಯನ್ನು ಭೆಟಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭೇಟಿ ಸಾಧ್ಯವಾಗಿಲ್ಲ. ಇದರಿಂದಾಗಿ ಇಮ್ರಾನ್‌ ಖಾನ್‌ ಸಾವಿನ ಸುದ್ದಿಗೆ ಮತ್ತಷ್ಟು ಪುಷ್ಠಿ ದೊರಕಂತಾಗಿದೆ.

ಭ್ರಷ್ಟಾಚಾರದ ಆರೋಪದ ಮೇಲೆ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕ್‌ ಮಾಜಿ ಪ್ರಧಾನಿಯನ್ನು ರಾಜಕೀಯದಿಂದ ದೂರವಿಡಲು ಇದು ಕಟ್ಟು ಕಥೆ ಎಂದು ಹಲವರು ಈ ಆರೋಪಗಳನ್ನು ತಳ್ಳಿ ಹಾಕುತ್ತಿದ್ದಾರೆ. ಈ ಕುರಿತು ಇಸ್ಲಾಮಾಬಾದ್‌ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದ್ದು, “ಪೂರ್ವ ನಿಯೋಜಿತ ಪ್ರತಿಭಟನೆಗಳ ಮಾಹಿತಿ ಬಂದ ಕೂಡಲೇ, ಇಸ್ಲಾಮಾಬಾದ್‌ನಲ್ಲಿ ಅಧಿಕಾರಿಗಳು ಎರಡು ತಿಂಗಳುಗಳ ಕಾಲ ನಿಷೇಧ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!