ಉದಯವಾಹಿನಿ, ಕ್ಯಾಲಿಫೋರ್ನಿಯಾ : ಅಮೆರಿಕದ ಎಐ ಸರ್ವಿಸ್ ಸ್ಟಾರ್ಟಪ್ ಆಗಿರುವ ಮರ್ಕ‌್ರನ ಮೂವರು ಸಂಸ್ಥಾಪಕರು ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಸ್ವನಿರ್ಮಿತ ಶತಕೋಟ್ಯಾಧಿಪತಿಗಳೆನಿಸಿದ್ದಾರೆ ಶಾಲಾ ಕಾಲೇಜು ದಿನಗಳಿದ ಗೆಳೆಯರಾಗಿರುವ, ಸಮಾನ ವಯಸ್ಕರೂ, ಸಮಾನ ಮನಸ್ಕರೂ ಆಗಿರುವ ಆದರ್ಶ್‌ ಹಿರೇಮಠ , ಸೂರ್ಯ ಮಿಧ ಮತ್ತು ಬ್ರೆಂಡಾನ್ ಪೂಡಿ ಅವರು ವಿಶ್ವದ ಅತೀ ಕಿರಿಯ ಸೆಲ್ಸ್ ಮೇಡ್ ಬಿಲಿಯನೇರ್ ಎನ್ನುವ ದಾಖಲೆಗೆ ಬಾಜನರಾಗಿದ್ದಾರೆ.
22 ವರ್ಷದ ವಯಸ್ಸಿನಲ್ಲಿ ಈ ಮೂವರು ಶತಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂವರಲ್ಲಿ ಆದರ್ಶ್ ಹಿರೇಮರ್ ಕರ್ನಾಟಕ ಮೂಲದ ಕುಟುಬದವರು. ಸೂರ್ಯ ಮಿಧಾ ಕೂಡ ಭಾರತ ಮೂಲದ ಕುಟುಂಬದವರು. ಫೂಡಿ ಮಾತ್ರ ಸ್ಥಳೀಯ ಅಮೆರಿಕನ್. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬಗ್್ರ ಅವರು 2008ರಲ್ಲಿ 23ರ ವಯಸ್ಸಿನಲ್ಲಿ ಬಿಲಿಯನೇರ್ ಎನಿಸಿದ್ದರು. ಈವರೆಗೆ ಅದೇ ದಾಖಲೆಯಾಗಿತ್ತು.
ಈಗ ಆದರ್ಶ್ ಹಿರೇಮರ್ ಹಾಗೂ ಅವರ ಸ್ನೇಹಿತರು ಆ ದಾಖಲೆ ಮುರಿದಿದ್ದಾರೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಬಹಳ ಪ್ರತಿಷ್ಠಿತ ಬೇ ಏರಿಯಾದಲ್ಲಿ ಬೆಳೆದು ಬಂದವರು ಈ ಮೂವರು ಗೆಳೆಯರು. ಶಾಲೆಯಲ್ಲಿ ಓದುವಾಗ ನಡೆದ ಡಿಬೇಟ್ ಕಾರ್ಯಕ್ರಮದಲ್ಲಿ ಈ ಮೂವರ ಸಮಾಗಮವಾಗಿತ್ತು. ಅಲ್ಲಿಂದ ಮುಂದೆ ಇವರ ಬೆಸುಗೆ ಗಟ್ಟಿಯಾಗುತ್ತಾ ಹೋಯಿತು.

ಮೆರ್ಕರ್ ಸ್ಟಾರ್ಟಪ್‌ನ ಮೂವರು ಸಂಸ್ಥಾಪಕರು ಉದಯೋನ್ಮುಖ ಪ್ರತಿಭೆಗಳನ್ನು ಉತ್ತೇಜಿಸಲೆಂದು ನೀಡಲಾಗುವ ಥಿಯೆಲ್ ಫೆಲೋಶಿಪ್‌ಗೆ ಈ ಮೂವರು ಸ್ನೇಹಿತರನ್ನು ಆಯ್ಕೆ ಮಾಡಲಾಯಿತು. ಆ ಫೆಲೋಶಿಪ್ ಸಿಕ್ಕ ಬಳಿಕ ಆದರ್ಶ್ ಹಿರೇಮ‌ರ್ ಹಾಗೂ ಅವರ ಇಬ್ಬರು ಸ್ನೇಹಿತರು ಕಾಲೇಜು ಓದಿಗೆ ತಿಲಾಂಜಲಿ ಹಾಡಿ, ಫೆಲೋಶಿಪ್‌ನಿಂದ ಸಿಕ್ಕ ಗ್ರಾಂಟ್ ಬಳಸಿ ಸ್ಟಾರ್ಟಪ್ ಆರಂಭಿಸಿದರು.

Leave a Reply

Your email address will not be published. Required fields are marked *

error: Content is protected !!