ಉದಯವಾಹಿನಿ, ರೋಬೋ, 2.0, ಐಗಳಂತಹ ವಿಭಿನ್ನ ಸಿನಿಮಾವನ್ನ ಕೊಟ್ಟ ತಮಿಳು ನಿರ್ದೇಶಕ ಎಸ್.ಶಂಕರ್ ಅವರ ನಿರ್ದೇಶನದ ಹೊಸ ಸಿನಿಮಾಗೆ ಅದ್ಧೂರಿ ಬಜೆಟ್ ಪ್ಲ್ಯಾನ್ ಮಾಡಲಾಗಿದೆಯಂತೆ. ಅಂದಹಾಗೆ ಈ ಸಿನಿಮಾದ ಬಜೆಟ್ ಬರೋಬ್ಬರಿ 1,000 ಕೋಟಿ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಶೀರ್ಷಿಕೆ ವೆಲ್ಪಾರಿ ಎಂದು ಹೇಳಲಾಗ್ತಿದೆ. ಈ ಸಿನಿಮಾಗೆ 2026ರಲ್ಲಿ ಮುಹೂರ್ತ ಕೂಡಾ ನೆರವೇರಿಸಲು ಭರ್ಜರಿಯಾಗಿ ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗ್ತಿದೆ.
ಈ ಸಿನಿಮಾಗೆ ವೆಲ್ಪಾರಿ ಅಂತಲೂ ಶೀರ್ಷಿಕೆ ಇಡಲಾಗಿದೆಯಂತೆ. ತಮಿಳಿನ ಖ್ಯಾತ ಲೇಖಕ, ರಾಜಕಾರಣಿ, ಸಂಸದರಾದ ಸು.ವೆಂಕಟೇಶನ್ ಅವರು ಬರೆದಿರುವ `ವೀರ ಯುಗ ನಾಯಗನ್ ವೆಲ್ಪಾರಿ’ ಐತಿಹಾಸಿಕ ಕಾದಂಬರಿ ಆಧಾರಿತ ಕಥೆಯನ್ನ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕ ಎಸ್.ಶಂಕರ್. ಎಂಥಿರನ್ ಸಿನಿಮಾ ನನ್ನ ಡ್ರೀಮ್ ಪ್ರಾಜೆಕ್ಟ್ ಎಂದಿದ್ದ ನಿರ್ದೇಶಕ ಶಂಕರ್ ವೆಲ್ಪಾರಿ ಸಿನಿಮಾ ನನಗೆ ಹೆಚ್ಚು ಸ್ಪೂರ್ತಿ ನೀಡಿದ ಸಿನಿಮಾ ಎಂದಿದ್ದಾರೆ. ಬಹಿರಂಗ ವೇದಿಕೆ ಮೇಲೆ ಈ ಸಿನಿಮಾ ಬಗ್ಗೆ ಮಾತಾಡಿದ್ದಾರೆ ನಿರ್ದೇಶಕ ಶಂಕರ್.
ಅಂದಹಾಗೆ ವೆಲ್ಪಾರಿ ಸಿನಿಮಾ ಕಥೆಯ ಕೇಂದ್ರಬಿಂದು ಶ್ರೇಷ್ಠರಾಜನಾದ `ಪಾರಿ’ಯ ಸುತ್ತ ಸುತ್ತುತ್ತದೆ. ಪಾರಿ ರಾಜನು ಮುಳ್ಳೈ ಎಂಬ ರಾಜ್ಯದ ಅತ್ಯಂತ ಕರುಣಾಮಯಿ ರಾಜನಾಗಿದ್ದರು. ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದ ಪಾರಿ ರಾಜನ ಶೌರ್ಯ ಪರಾಕ್ರಮಗಳನ್ನ ಈ ಮೂಲಕ ಜಗತ್ತಿಗೆ ಅನಾವರಣ ಮಾಡಲು ಸಿದ್ಧರಾಗಿದ್ದಾರೆ ನಿರ್ದೇಶಕ ಶಂಕರ್. ಇದಕ್ಕಾಗಿ ತಮಿಳಿನ ಸೂಪರ್‌ಸ್ಟಾರ್‌ಗಳಾದ ಚಿಯಾನ್ ವಿಕ್ರಂ, ಸೂರ್ಯ ಹಾಗೂ ಬಾಲಿವುಡ್‌ನ ರಣವೀರ್ ಸಿಂಗ್, ಶಾರುಖ್ ಖಾನ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *

error: Content is protected !!