ಉದಯವಾಹಿನಿ, ಬಹುತೇಕರ ಸಮಸ್ಯೆ ಏನೆಂದರೆ ಅಧಿಕ ತೂಕ. ಅಗತ್ಯಕ್ಕಿಂತ ಹೆಚ್ಚಾಗಿರುವ ತೂಕವು ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಮ್ಮೆ ಸಮರ್ಪಕವಾದ ಜೀವನಶೈಲಿ ಮತ್ತು ಕಳಪೆ ಆಹಾರಗಳು ಕೂಡ ತೂಕ ಹೆಚ್ಚಳಕ್ಕೆ ವಿಶೇಷವಾಗಿ ಕಾರಣವಾಗಬಹುದು.ಪೌಷ್ಟಿಕ ತಜ್ಞರ ಪ್ರಕಾರ ಕೆಲವು ಆಹಾರಗಳ ಸೇವನೆಯಿಂದ ಚಯಾಪಚಯ ಕ್ರಿಯೆ ಸುಧಾರಿಸಿ, ತ್ವರಿತವಾಗಿ ದೇಹದ ತೂಕವನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ.ದೈಹಿಕ ಚಟುವಟಿಕೆಯ ಜೊತೆಜೊತೆಗೆ ಯಾವ ಆಹಾರ ಸೇವನೆ ಮಾಡಿದರೆ, ತ್ವರಿತವಾಗಿ ತೂಕವನ್ನು ಇಳಿಸಿಕೊಳ್ಳಬಹುದು ಎಂಬುದನ್ನು ಲೇಖನದಲ್ಲಿ ನೀಡಲಾಗಿದೆ. ಸಂಪೂರ್ಣವಾಗಿ ಓದಿ, ಅನುಸರಿಸಿ.
ನೀವು ಸಸ್ಯಾಹಾರಿಗಳಾಗಿದ್ದು, ತೂಕ ಇಳಿಕೆಯ ಆಯೋಜನೆಯಲ್ಲಿದ್ದರೆ ಬೀನ್ಸ್ ಅನ್ನು ನಿಮ್ಮ ಡಯಟ್ ಚಾರ್ಟ್ ನಲ್ಲಿ ಸೇರಿಸಬಹುದು. ಇದು ಕೇವಲ ಸಸ್ಯಾಹಾರಿಗಳಿಗೆ ಮಾತ್ರವಲ್ಲ, ಬದಲಾಗಿ ಮಾಂಸಹಾರಿಗಳು ಕೂಡ ನಿಮ್ಮ ಡಯಟ್ ನಲ್ಲಿ ಸೇರಿಸಿ.ಮುಖ್ಯವಾಗಿ ಬೀನ್ಸ್ ಸಮೃದ್ಧವಾಗಿದೆ. ಬೀನ್ಸ್ ಕೂಡ ಹೆಚ್ಚಿನ ಫೈಬರ್ ಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಈ ಕ್ರಿಯೆಯು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದಾಗಿ ಹೆಚ್ಚೆಚ್ಚು ತಿನ್ನುವುದನ್ನು ನೀವು ನಿಯಂತ್ರಿಸಬಹುದು. ನೀವು ಹೆಚ್ಚೆಚ್ಚು ಸೇವಿಸುವುದರಿಂದ ಕ್ಯಾಲೋರಿಯ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಕಡಿಮೆ ತಿನ್ನಲು ಒಂದು ಸುಲಭವಾದ ಉಪಾಯವಿದೆ. ಅದೇನೆಂದರೆ, ಊಟಕ್ಕಿಂತ ಮುಂಚೆ ಒಂದು ಕಪ್ ಸೂಪ್ ಕುಡಿಯಿರಿ. ಇದು ನಿಮ್ಮ ಹೊಟ್ಟೆಯನ್ನು ಅರ್ಧದಷ್ಟು ತುಂಬಿಸುತ್ತದೆ. ಬೆಣ್ಣೆಯನ್ನು ಬೆರಸಿದ ಸೂಪ್ ಆದಷ್ಟು ಮಿತಗೊಳಿಸಿ.
ನೀವು ಮಾಂಸಹಾರಿಯಾಗಿರಲೀ, ಸಸ್ಯಾಹಾರಿಯಾಗಿರಲೀ ಮೊಟ್ಟೆ ನಿಮ್ಮ ತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದೊಂದು ಪ್ರೋಟೀನ್ ಭರಿತವಾದ ಆಹಾರವಾಗಿದ್ದು, ನಿಮ್ಮ ಡಯಟ್ ನಲ್ಲಿ ಸೇರಿಸಬಹುದು.
