ಉದಯವಾಹಿನಿ, ಬೆಂಗಳೂರು : ಅದೇಷ್ಟೋ ಮಂದಿ ಆಹಾರ ಪ್ರೇಮಿಗಳು ಇದ್ದಾರೆ. ಪ್ರವಾಸಿ ತಾಣ ವೀಕ್ಷಿಸುವ ಜತೆಗೆ ಅಲ್ಲಿಯ ಆಹಾರವನ್ನು ಸವಿಯಲೆಂದು ಪ್ರವಾಸ ಹೋಗುತ್ತಾರೆ. ಅದೇ ರೀತಿ ವಿದೇಶಿ ಪ್ರಜೆಯೊಬ್ಬರು ಬೆಂಗಳೂರಿನ ಗರಿಗರಿಯಾದ ದೋಸೆ ಹಾಗೂ ಮೃದುವಾದ ಇಡ್ಲಿಯನ್ನು ಸವಿದು ಬೆಂಗಳೂರು ಭಾರತದ ಅತ್ಯುತ್ತಮ ಆಹಾರ ನಗರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳಿಗೆ ಫುಲ್ ಫಿದಾ ಆಗಿರುವ ವಿದೇಶಿ ಪ್ರಜೆ ತನ್ನ ಅಭಿಪ್ರಾಯವನ್ನು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ವಿದೇಶಿಗನ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.
ಭಾರತದ ವಿವಿಧ ನಗರಗಳು ಸೇರಿದಂತೆ ಪಾಕಿಸ್ತಾನಕ್ಕೂ ತೆರಳಿ ಅಲ್ಲಿನ ಪ್ರವಾಸಿ ತಾಣಗಳು ಹಾಗೂ ಆಹಾರಗಳನ್ನು ಸವಿದಿದ್ದರು. ಹಗ್ ಹೆಸರಿನ ತಮ್ಮ ಇನ್ನಾ ಗ್ರಾಮ್ ಖಾತೆಯಲ್ಲಿ ಪ್ರಶೋತ್ತರ ಸರಣಿಯನ್ನು ನಡೆಸಿದ್ದು, ಈ ವೇಳೆ ಬಳಕೆದಾರರೊಬ್ಬರು ಪ್ರತಿಯೊಂದು ದೇಶದಲ್ಲೂ ಅತ್ಯುತ್ತಮವಾದ ಆಹಾರ ನಗರವನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ. ಕೇವಲ ಬೆಳಗ್ಗಿನ ಉಪಾಹಾರ ಸಂಸ್ಕೃತಿಯಿಂದಾಗಿ ಭಾರತದ ಅತ್ಯುತ್ತಮ ಆಹಾರ ನಗರ ಬೆಂಗಳೂರು. ಬೆಂಗಳೂರಿನ ಬೆಳಗ್ಗಿನ ಉಪಾಹಾರವಾದ ಇಡ್ಲಿ ಸಾಂಬಾರ್, ಮಸಾಲಾ ದೋಸೆಯನ್ನು ಫಿಲ್ಟರ್ ಕಾಫಿಯೊಂದಿಗೆ ಸವಿದಿದ್ದಾರೆ. ದೋಸೆಗಳು ತುಂಬಾ ಗರಿಗರಿಯಾಗಿವೆ. ಇಡ್ಲಿಯನ್ನು ಬಾಯಿಲ್ಲಿಟ್ಟರೆ ಕರಗುತ್ತದೆ ಎಂದಿದ್ದಾರೆ. ಇನ್ನು ಕರಾಚಿಯನ್ನು ಪಾಕಿಸ್ತಾನದ ಅತ್ಯುತ್ತಮ ಆಹಾರ ನಗರವೆಂದು ಆಯ್ಕೆ ಮಾಡಿದ್ದಾರೆ. ಈ ವೀಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಒಮ್ಮೆ ಈ ತಿನಿಸುಗಳನ್ನು ಆಸ್ವಾದಿಸಿದರೆ ಮತ್ತೆ ಮತ್ತೆ ನೀವು ಬರುತ್ತೀರಿ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.
