ಉದಯವಾಹಿನಿ, ಟಾಲಿವುಡ್‌ನ ನಟ ನಾಗ ಚೈತನ್ಯ , ಸಮಂತಾರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಧುಲಿಪಲಾ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. 2024ರ ಡಿಸೆಂಬರ್ 04 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಹಸೆಮಣೆ ಏರಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆ ಮದುವೆಯ ವಿಡಿಯೋವನ್ನ ಜಾಲತಾಣದಲ್ಲಿ ಹಂಚಿಕೊಂಡು ವಿಶೆಷವಾಗಿ ಶುಭ ಹಾರೈಸಿದ್ದಾರೆ ಶೋಭಿತಾ.
ನಾಗಚೈತನ್ಯ ಹಾಗೂ ಶೋಭಿತಾ ಮದ್ವೆಯಾಗಿ ಒಂದುವರ್ಷ ತುಂಬುವಷ್ಟರಲ್ಲೇ ನಾಗಚೈತನ್ಯ ಮಾಜಿ ಪತ್ನಿ ಸಮಂತಾ ರುತ್‌ಪ್ರಭು ಎರಡನೇ ಮದ್ವೆಯಾಗಿದ್ದಾರೆ. ಒಂಟಿಯಾಗಿದ್ದ ಬಾಳಿಗೆ ನಿರ್ದೇಶಕ ರಾಜ್ ನಿಡಿಮೋರು ಜಂಟಿಯಾಗಿದ್ದಾರೆ. ಫ್ಯಾಮಿಲಿಮ್ಯಾನ್, ಸಿಟಡೆಲ್ ಹನಿಬನಿ ಸಿನಿಮಾದ ನಿರ್ದೇಶಕ ರಾಜ್ ಜೊತೆ ಸಪ್ತಪದಿ ತುಳಿದಿದ್ದಾರೆ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಮದ್ವೆಯ ವಿಡಿಯೋ ಹಂಚಿಕೊಂಡ ಶೋಭಿತಾಗೆ ಜಾಲತಾಣದಲ್ಲಿ ವಿವಿಧ ರೀತಿಯ ಕಾಮೆಂಟ್ಸ್ ಬರುತ್ತಿವೆ. ಇನ್ನು ನಾಗಚೈತನ್ಯ ಈ ವಿಡಿಯೋಗೆ ಕಾಮೆಂಟ್ ಹಾಕಿದ್ದಾರೆ. ನಿನ್ನ ಜೀವನದ ಭಾಗ ಆಗೋದಕ್ಕೆ ನಾನು ಅದೃಷ್ಟ ಮಾಡಿದ್ದೆ ಎಂದು ಶೋಭಿತಾ ವಿಡಿಯೋಗೆ ನಾಗಚೈತನ್ಯ ಕಮೆಂಟ್ ಹಾಕಿದ್ದಾರೆ. ಈ ಕಾಮೆಂಟ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ.
