ಉದಯವಾಹಿನಿ, ಭಾರತೀಯ ರಸ್ತೆಬದಿ ತಿಂಡಿಗಳ ಲೋಕದಲ್ಲಿ ಆಲೂ ಚಾಟ್ ಒಂದು ಅನನ್ಯ ಸ್ಥಾನ ಹೊಂದಿದೆ. ಸಾಮಾನ್ಯ ಆಲೂಗಡ್ಡೆಯೇ ಆದರೆ ಚಾಟ್ ಮಸಾಲೆ, ನಿಂಬೆ ರಸ, ಕಾರದ ಪುಡಿ, ಚಟ್ನಿಗಳ ಸಂಗಮದಲ್ಲಿ ರುಚಿಯ ರಾಜಕುಮಾರನಾಗಿ, ಕೇವಲ ಹತ್ತು ನಿಮಿಷಗಳಲ್ಲಿ ಸಿದ್ಧವಾಗುವ ಈ ತಿಂಡಿ, ಮಕ್ಕಳಿಗೂ ಸೇರಿದಂತೆ ಎಲ್ಲರಿಗೂ ಸಂಜೆ ಸ್ನಾಕ್ಸ್ಗೆ ಒಳ್ಳೆಯ ಆಯ್ಕೆಯಾಗಿದೆ.
ಹಾಗಾಗಿ, ಮಸಾಲೆಗಳ ಸೊಗಡು, ಹುಳಿ–ಖಾರದ ಮಿಶ್ರಣ ಮತ್ತು ಸಿಹಿ–ಖಾರದ ಚಟ್ನಿಯೊಂದಿಗೆ ರುಚಿ ರುಚಿಯಾಗಿ ಬಾಯಲ್ಲಿ ಕರಗುವಂತೆ ಮಾಡಬಹುದಾದ ಆಲೂ ಚಾಟ್ನ ಸಿಂಪಲ್ ರೆಸಿಪಿ ಆಲೂ ಚಾಟ್ ತಯಾರಿಗೆ ಬೇಕಾಗುವ ಸಾಮಗ್ರಿಗಳು 250 ಗ್ರಾಂ ಆಲೂಗಡ್ಡೆ ಮಸಾಲೆಗಳು: ಕಪ್ಪು ಮೆಣಸು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಅಮ್ಚೂರ್ ಪುಡಿ, ಚಾಟ್ ಮಸಾಲೆ ರುಚಿಗೆ ತಕ್ಕಂತೆ ಉಪ್ಪು, ಸುವಾಸನೆಗಾಗಿ ಪುದಿನೆ ಹಾಗೂ ಕೊತ್ತಂಬರಿ ಸೊಪ್ಪು ಒಂದು ಹಸಿಮೆಣಸಿನ ಕಾಯಿಯ ತುಂಡು, ಒಂದು ಚಮಚ ಹುಣಸೆ ಹಣ್ಣಿನ ಸಿಹಿ ಚಟ್ನಿ, ಲಿಂಬೆ ರಸ ಎರಡು ಚಮಚ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಉದ್ದನೆಯ ತುಂಡುಗಳಾಗಿ ಕತ್ತರಿಸಿ. ಇದನ್ನು ಫಿಂಗರ್ ಚಿಪ್ಸ್ ಆಕಾರದಲ್ಲಿ ಕಟ್ ಮಾಡಿದರೆ ಚೆನ್ನಾಗಿರುತ್ತದೆ.
