ಉದಯವಾಹಿನಿ, ಚಳಿಗಾಲದಲ್ಲಿ ದೇಹದ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವ ಕಾರಣ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಋತುಮಾನದಲ್ಲಿ ಸೋಂಕುಗಳು ಬೇಗ ತಗಲುತ್ತವೆ. ತಜ್ಞರ ಪ್ರಕಾರ, ಇಂತಹ ಋತುಮಾನದಲ್ಲಿ ಔಷಧೀಯ ಗುಣ ಇರುವ ಆಹಾರಗಳನ್ನು ಸೇವಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಂತಹ ಪೌಷ್ಟಿಕಯುಕ್ತ ಆಹಾರ ಪದಾರ್ಥಗಳಲ್ಲಿ ನೆಲ್ಲಿಕಾಯಿ ( ಕೂಡ ಒಂದಾಗಿದ್ದು, ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಮಧುಮೇಹವನ್ನು ಇದು ನಿಯಂತ್ರಿಸಲಿದ್ದು, ಉರಿಯೂತ ನಿವಾರಕ, ಅಸ್ತಮಾ ನಿವಾರಕ ಗುಣವನ್ನೂ ಹೊಂದಿದೆ. ಉಸಿರಾಟದ ಸಮಸ್ಯೆಗಳನ್ನು ಇದು ತಡೆಯುತ್ತವೆ. ಅದರಲ್ಲೂ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಹೇಗಿರುತ್ತವೆ ಮತ್ತು ಏನೆಲ್ಲ ಲಾಭಗಳು ಸಿಗುತ್ತವೆ ಎಂಬುದರ ಬಗ್ಗೆ ತಿಳಿಯೋಣ.
ಹಿಂದಿನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿ ಬಳಸುತ್ತಿರುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಪ್ರಮಾಣ ಅತೀ ಹೆಚ್ಚಾಗಿದೆ. 100 ಗ್ರಾಂ ತಾಜಾ ನೆಲ್ಲಿಕಾಯಿಯಲ್ಲಿ, 20 ಕಿತ್ತಳೆ ಹಣ್ಣುಗಳಿಗೆ ಸಮನಾದ ವಿಟಮಿನ್ ಸಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಶಕ್ತಿ, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮತ್ತು ಅನೇಕ ಅಗತ್ಯ ವಿಟಮಿನ್‌ಗಳು ಸಹ ಲಭ್ಯವಿದ್ದು, ಆ್ಯಂಡಿ ಆಕ್ಸಿಡೆಂಟ್ ಅಂಶಗಳು ಇದರಲ್ಲಿ ಇರುವುದರಿಂದ ದೇಹದ ಸಂಪೂರ್ಣ ಆರೋಗ್ಯವನ್ನು ಸಮದೂಗಿಸಿಕೊಂಡು ಹೋಗುತ್ತದೆ. ಇದರೊಂದಿಗೆ ನೆಲ್ಲಿಕಾಯಿಯಲ್ಲಿ ಶಕ್ತಿ, ಕ್ಯಾಲೋರಿಗಳು, ಫೈಬರ್, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ 50%, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್‌ಗಳು ಕೂಡ ಸಮೃದ್ಧವಾಗಿದ್ದು, ಇದು ಅನೇಕ ರೀತಿಯ ಅಸ್ವಸ್ಥತೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
