ಉದಯವಾಹಿನಿ, ಲಕ್ನೋ: ಕ್ರಿಮಿನಲ್‌ಗಳು ಈ ಭೂಮಿಗೆ ಹೊರೆಯಾಗಿದ್ದಾರೆ. ಅವರಿಗಾಗಿ ಯಮರಾಜ ಕಾಯುತ್ತಿದ್ದಾನೆ. ನಿಮಗೆ ನರಕಕ್ಕೆ ಟಿಕೆಟ್‌ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಎಚ್ಚರಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಕೆಲವರು ಹೊರೆಯಾಗಿದ್ದಾರೆ. ಇಂತಹವರ ಹೊರೆಯಿಂದ ಭೂಮಿಯನ್ನು ಮುಕ್ತಗೊಳಿಸಬೇಕು. ಈ ಹೊರೆಯಿಂದ ಮುಕ್ತಿ ಭೂಮಿಗೆ ಮಾತ್ರವಲ್ಲ, ಇತರೆ ಜನರಿಗೂ. ನೀವು (ಕ್ರಿಮಿನಲ್‌ಗಳು) ನಮ್ಮ ಮಗಳ ಸುರಕ್ಷತೆಯೊಂದಿಗೆ ಆಟವಾಡಿದರೆ, ಮುಂದಿನ ದಾರಿಯಲ್ಲಿ ಯಮರಾಜ ನಿಮಗಾಗಿ ಕಾಯುತ್ತಿರುತ್ತಾನೆ. ಸೀದ ನರಕಕ್ಕೆ ನಿಮಗೆ ದಾರಿ ತೋರಿಸುತ್ತಾನೆ ಎಂದು ಸಿಎಂ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.
ಪ್ರತಿಯೊಬ್ಬರು ನ್ಯಾಯವನ್ನು ಬಯಸುತ್ತಾರೆ. ಸಕಾಲಿಕ ನ್ಯಾಯವನ್ನು ಬಯಸುತ್ತಾರೆ. ಅಪರಾಧಿಗಳ ದರ್ಪ, ಮಾಫಿಯಾವನ್ನು ನಿಲ್ಲಿಸಬೇಕು. ನಾವು ಅವರಿಗೆ ಅವರದೇ ಭಾಷೆಯಲ್ಲಿ ಉತ್ತರಿಸುತ್ತೇವೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಈಗ ಮಾಫಿಯಾ ಮುಕ್ತವಾಗಿದೆ. ‘ಒಂದು ಜಿಲ್ಲೆ, ಒಂದು ಮಾಫಿಯಾ’ ಅಲ್ಲ. ಬದಲಿಗೆ ‘ಒಂದು ಜಿಲ್ಲೆ, ಒಂದು ಉತ್ಪನ್ನ’, ‘ಒಂದು ಜಿಲ್ಲೆ, ಒಂದು ಕಾಲೇಜು’ ಜೊತೆ ಸಂಬಂಧ ಹೊಂದಿದೆ ಎಂದು ಸಿಎಂ ಹೇಳಿದ್ದಾರೆ. ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಯಾವುದನ್ನು ‘ಮಾಸ್ಟರ್‌ಸ್ಟ್ರೋಕ್’ ಎಂದು ಪರಿಗಣಿಸುತ್ತೀರಿ ಎಂದು ಕೇಳಿದಾಗ, ಹಾಗೆ ಪ್ರತ್ಯೇಕಿಸುವುದು ಕಷ್ಟ ಸಿಎಂ ಪ್ರತಿಕ್ರಿಯಿಸಿದರು. ಮುಂದುವರಿದು, ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಅಡಿಪಾಯ ಹಾಕುವುದು, ಅದರ ನಿರ್ಮಾಣ ಮತ್ತು ದೇವಾಲಯದಲ್ಲಿ ‘ಧರ್ಮ ಧ್ವಜ’ (ಧ್ವಜ) ಹಾರಿಸುವುದನ್ನು ನೋಡಿದ್ದಕ್ಕೆ ಕೃತಜ್ಞನಾಗಿದ್ದೇನೆ ಎಂದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!