ಉದಯವಾಹಿನಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಉಗ್ರಂ ಮಂಜು ಹಾಗೂ ಗಿಲ್ಲಿ ನಟ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಈ ಬಗ್ಗೆ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಗಿಲ್ಲಿ ನಟಗೆ ಛೀಮಾರಿ ಹಾಕಿ ಉಗ್ರಂ ಮಂಜು ಪರ ಭಾವಿ ಪತ್ನಿ ಸಂಧ್ಯಾ ಕೂಡ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಈಗ ಎಲ್ಲ ವಿಚಾರಗಳ ಬಗ್ಗೆ ವಿಶ್ವವಾಣಿ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಗಿಲ್ಲಿ ವ್ಯಕ್ತಿತ್ವ ಇಷ್ಟ ಪಡುವ ಒಂದು ವರ್ಗ ಇದೆ
ಮದುವೆ ತಯಾರಿ ಬಗ್ಗೆ ಮಾತನಾಡಿ, ʻಜನವರಿ 23 ಮದುವೆ ಫಿಕ್ಸ್ ಆಗಿದೆ. ನಮ್ಮ ಮನೆ ದೇವಸ್ಥಾನದಲ್ಲೇ. ಮಾಮೂಲಿ ತಯಾರಿ ಆಗ್ತಿದೆʼ ಎಂದರು. ʻಬಿಗ್ ಬಾಸ್ ಮನೆಗೆ ನನಗೆ ಬ್ಯಾಚುಲರ್ ಪಾರ್ಟಿ ಕೊಟ್ಟಿದ್ದರು. ಅನುಭವ ಚೆನ್ನಾಗಿತ್ತು. ಒಂದು ಟಾಸ್ಕ್ ಕೊಟ್ಟಿದ್ದರುʼ ಎಂದರು. ಗಿಲ್ಲಿ ಕುರಿತಾಗಿ ಮಾತನಾಡಿ, ʻಕಮೆಂಟ್ ಬಾಕ್ಸ್ ಅನ್ನು ಆಫ್ ನಾನು ಮಾಡಿಲ್ಲ. ಒಬ್ಬೊಬ್ಬರು ಒಂದೊಂದು ವ್ಯಕ್ತಿತ್ವವನ್ನ ಇಷ್ಟ ಪಡುತ್ತಾರೆ. ಗಿಲ್ಲಿ ವ್ಯಕ್ತಿತ್ವ ಇಷ್ಟ ಪಡುವ ಒಂದು ವರ್ಗ ಇದೆ. ಅವರು ಕೂಡ ಕಷ್ಟ ಪಟ್ಟೇ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲೇ ಎಲ್ಲವೂ ಹಾಕ್ತಾರೆ ಅನ್ನೋಕೆ ಆಗಲ್ಲ. ಇನ್ನು ನಾನು ಸೆಟ್ ಬಾಯ್ ಆಗೇ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು. ಗಿಲ್ಲಿ ಕೂಡ ಸೆಟ್ ಬಾಯ್ ಆಗೇʼ ಬಂದಿದ್ದಾರೆ.
