ಉದಯವಾಹಿನಿ, ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು ಡಿಸೆಂಬರ್ 5ರಂದು ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾವೀಗ ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಮೊದಲ ದಿನವೇ ಭಾರತದಲ್ಲಿ 28.60 ಕೋಟಿ ರೂ. ಗಳಿಕೆ ಮಾಡಿ, ಆರಂಭಿಕ ಮುನ್ನಡೆ ಸಾಧಿಸಿದ್ದ ʻಧುರಂಧರ್ʼ ಸಿನಿಮಾವು ಇದೀಗ ಕಲೆಕ್ಷನ್ ಅನ್ನು ಏರಿಸಿಕೊಂಡಿದೆ. ಎರಡನೇ ದಿನ ಮೊದಲ ದಿನಕ್ಕಿಂತ ಹೆಚ್ಚಿನ ಗಳಿಕೆ ಆಗಿದೆ.
ಎರಡು ದಿನಗಳಿಗೆ 61.70 ಕೋಟಿ ರೂ. ಗಳಿಕೆ :ಹೌದು, ಮೊದಲ ದಿನ ಭಾರತದಲ್ಲಿ 28.60 ಕೋಟಿ ರೂ. ಕಲೆಕ್ಷನ್ ಮಾಡಿದ್ದ ʻಧುರಂಧರ್ʼ ಸಿನಿಮಾವು ಎಡರನೇ ದಿನ 33.10 ಕೋಟಿ ರೂ. ಗಳಿಸುವ ಮೂಲಕ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಅಲ್ಲಿಗೆ ಮೊದಲ ಎರಡು ದಿನಗಳಿಗೆ 61.70 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನು, ಭಾನುವಾರ ರಜಾ ದಿನವಾದ್ದರಿಂದ ಇಂದು ಕೂಡ 30 ಕೋಟಿ ರೂ. ಮೇಲೆ ಗಳಿಕೆ ಆಗುವ ನಿರೀಕ್ಷೆ ಇದೆ. ಅಲ್ಲಿಗೆ ಮೊದಲ ಮೂರು ದಿನಗಳಿಗೆ ಧುರಂಧರ್ ಚಿತ್ರದ ಗಳಿಕೆಯು 90+ ಕೋಟಿ ರೂ. ಆಗಲಿದೆ. ಅಂದಹಾಗೆ, ಇದು ಭಾರತದಲ್ಲಿನ ಗಳಿಕೆ ಆಗಿದ್ದು, ವಿಶ್ವಾದ್ಯಂತ ಈ ಚಿತ್ರವು ಎರಡು ದಿನಕ್ಕೆ 93.69 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಸಿಕ್ಕಿದೆ. ʻಧುರಂಧರ್ʼ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿವೆ. ರಣವೀರ್ ಮತ್ತು ಅಕ್ಷಯ್ ಖನ್ನಾ ಅವರ ಅಭಿನಯ ಮತ್ತು ಶಾಶ್ವತ್ ಸಚ್‌ದೇವ್ ಅವರ ಹಿನ್ನೆಲೆ ಸಂಗೀತಕ್ಕಾಗಿ ಪ್ರಶಂಸೆ ವ್ಯಕ್ತವಾಗಿದೆ. ಭಾರತೀಯ ಗೂಢಚಾರನ ಪಾತ್ರದಲ್ಲಿ ರಣವೀರ್ ನಟಿಸಿದ್ದಾರೆ.
