ಉದಯವಾಹಿನಿ, ಇಡ್ಲಿ ಮಾಡೋದು ಸಾಮಾನ್ಯ. ಕೆಲವರು ತರಕಾರಿ ಬಳಸಿ ಸ್ಟಫ್ಡ್ ಇಡ್ಲಿ ಮಾಡಿದರೆ, ಇನ್ನೂ ಕೆಲವರು ಸರಳವಾಗಿ ಇಡ್ಲಿ ಮಾಡುತ್ತಾರೆ ಆದರೆ ಅದರ ಹೊರತಾಗಿಯೂ ವಿಭಿನ್ನವಾಗಿ ಇಡ್ಲಿ ತಯಾರಿಸಬಹುದು. ಸಂಡೇ ಸ್ಪೆಷಲ್ ಮಾಡಿ ಸೌತೆಕಾಯಿ ಇಡ್ಲಿ…..
ಬೇಕಾಗುವ ವಿಧಾನಗಳು: ಸೌತೆಕಾಯಿ, ಚಿರೋಟಿ ರವೆ, ತೆಂಗಿನಕಾಯಿ ತುರಿ, ಮೆಣಸಿನಕಾಯಿ, ಕೊತ್ತಂಬರಿ, ಉಪ್ಪು
ಮಾಡುವ ವಿಧಾನ:ಮೊದಲಿಗೆ ಸೌತೆಕಾಯಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು. ಅದಕ್ಕೆ ಚಿರೋಟಿ ರವೆ ಹಾಕಿ, ಕಲಸಿಕೊಳ್ಳಬೇಕು. ಒಂದು ಮಿಕ್ಸರ್ ಜಾರಿಗೆ ತೆಂಗಿನಕಾಯಿ ತುರಿ ಹಾಕಿಕೊಂಡು, ಅದಕ್ಕೆ ಹಸಿರು ಮೆಣಸಿನಕಾಯಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ರವೆ ಹಾಗೂ ಸೌತೆಕಾಯಿ ಮಿಶ್ರಣಕ್ಕೆ ಹಾಕಿಕೊಳ್ಳಬೇಕು. ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಬೇಕು. ಮಿಶ್ರಣಕ್ಕೆ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಬಳಿಕ ಇಡ್ಲಿ ಪಾತ್ರೆಗೆ ರುಬ್ಬಿಕೊಂಡ ಹಿಟ್ಟನ್ನು ಹಾಕಿಕೊಂಡು, ಬೇಯಿಸಿಕೊಂಡರೆ ಇಡ್ಲಿ ತಯಾರಾಗುತ್ತದೆ.ಚಟ್ನಿ ಜೊತೆ ಬಿಸಿ ಬಿಸಿಯಾದ ಸೌತೆಕಾಯಿ ಇಡ್ಲಿ ಸವಿಯಬಹುದು.
