ಉದಯವಾಹಿನಿ , ಥಾಣೆ: ಯೂಟ್ಯೂಬರ್ ಗಳಿಬ್ಬರು ಮಾದಕ ದ್ರವ್ಯ ನೀಡಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಥಾಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಆಗಸ್ಟ್ 25ರಂದು ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಯೂಟ್ಯೂಬರ್ ಗಳು ಬಳಿಕ ಆಕೆಗೆ ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಇದರಿಂದ ತೀವ್ರವಾಗಿ ನೊಂದ ಮಹಿಳೆ ಅಂತಿಮವಾಗಿ ಡಿಸೆಂಬರ್ 5ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಥಾಣೆಯ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಕಳೆದ ವರ್ಷ ಆಗಸ್ಟ್ 25ರಂದು ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಕಾರಿನೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂದು ಗುರುತಿಸಲಾಗಿದೆ.
