ಉದಯವಾಹಿನಿ  ,ಕ್ಯಾರಕಸ್: ಸೆಪ್ಟೆಂಬರ್ 2ರಂದು ವೆನೆಝುವೆಲಾದ ಬಳಿ ಸಾಗುತ್ತಿದ್ದ ಮಾದಕ ವಸ್ತುಗಳಿದ್ದ ದೋಣಿಯ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಸಂಬಂಧಿಸಿದ ಹೊಸ ವರದಿಯು ಈ ದೋಣಿ ಅಮೆರಿಕಾದತ್ತ ಸಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಸ್ಸೆಥ್ ಗೆ ತೀವ್ರ ಹಿನ್ನಡೆಯಾಗಿದೆ.
ಅಮೆರಿಕಾದ ದಾಳಿಯಲ್ಲಿ ದೋಣಿಯಲ್ಲಿದ್ದ 11 ಮಂದಿ ಸಾವನ್ನಪ್ಪಿದರು. ದಾಳಿ ನಡೆದೊಡನೆ ಆ ಕುರಿತ ವಿವರಗಳನ್ನು ಟ್ರಂಪ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದು ` ವೆನೆಝುವೆಲಾದ ಮಾದಕ ವಸ್ತು ಭಯೋತ್ಪಾದಕರು ಅಕ್ರಮ ಮಾದಕ ವಸ್ತುಗಳನ್ನು ಅಮೆರಿಕಾದತ್ತ ಸಾಗಿಸುತ್ತಿದ್ದಾಗ ಅಂತರಾಷ್ಟ್ರೀಯ ಸಮುದ್ರದಲ್ಲಿ ಅವರ ಮೇಲೆ ದಾಳಿ ನಡೆಸಲಾಗಿದೆ. ಈ ಅತ್ಯಂತ ಅಪಾಯಕಾರಿ ಮಾದಕ ವಸ್ತು ಸಾಗಾಟ ಪ್ರಕ್ರಿಯೆ ಅಮೆರಿಕಾದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕಾದ ಪ್ರಮುಖ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದೆ. ದಾಳಿಯಲ್ಲಿ ಮೂವರು ಪುರುಷ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ’ ಎಂದು ಪೋಸ್ಟ್ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!