ಉದಯವಾಹಿನಿ , ಪೋರ್ಟೊ-ನೊವೊ: ಪಶ್ಚಿಮ ಆಫ್ರಿಕಾದ ಬೆನಿನ್ ರಾಷ್ಟ್ರದಲ್ಲಿ ಮಿಲಿಟರಿ ದಂಗೆಯ ಬಳಿಕ ಸರಕಾರವನ್ನು ವಿಸರ್ಜಿಸಲಾಗಿದೆ ಎಂದು ಯೋಧರ ಗುಂಪೊಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯ ಮೂಲಕ ಘೋಷಿಸಿದೆ.
ಅಧ್ಯಕ್ಷರನ್ನು ಪದಚ್ಯುತಗೊಳಿಸಲು ತಾವು ನಿರ್ಧರಿಸಿದ್ದೇವೆ. ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ವಿಸರ್ಜಿಸಿರುವುದಾಗಿ `ಮರು ಸ್ಥಾಪನೆಗಾಗಿ ಮಿಲಿಟರಿ ಸಮಿತಿ’ ಎಂದು ತನ್ನನ್ನು ಕರೆಸಿಕೊಂಡ ಗುಂಪು ಘೋಷಿಸಿದೆ. ಲೆಫ್ಟಿನೆಂಟ್ ಕರ್ನಲ್ ಪಾಸ್ಕಲ್ ಟಿಗ್ರಿ ಮಿಲಿಟರಿ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವುದಾಗಿ ಯೋಧರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!