ಉದಯವಾಹಿನಿ , ಬೆಂಗಳೂರು: ಇಲ್ಲಿನ ಪ್ರತಿಷ್ಠಿತ ಪಬ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ ಅನುಚಿತ ವರ್ತನೆ ಪ್ರಕರಣ ಸಂಬಂಧ ಸ್ಟಾರ್ ಕಿಡ್‌ಗಳಿಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆಯಿದ್ದು, ಗಲಾಟೆ ಸೇರಿದಂತೆ ಅನುಚಿತ ವರ್ತನೆ ಬಗ್ಗೆ ರಿಪೋರ್ಟ್ ನೀಡುವಂತೆ ಗೃಹ ಸಚಿವರು ತಾಕೀತು ಮಾಡಿದ್ದಾರೆ.
ಪ್ರಕರಣ ಸಂಬಂಧ ಜೈದ್ ಖಾನ್ ಹಾಗೂ ನಲಪಾಡ್‌ಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆಯಿದೆ. ಶಾಸಕ, ಸಚಿವರ ಹೆಸರು ಕೂಡ ತಳಕು ಹಾಕಿರುವ ಹಿನ್ನೆಲೆ ಪ್ರಕರಣದ ತನಿಖೆ ನಡೆಸಲು ಸ್ವತಃ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಈಗಾಗಲೇ ಪ್ರಾಥಮಿಕ ಹಂತದ ತನಿಖೆ ನಡೆಸಲಾಗಿದೆ. ಅಲ್ಲದೇ, ತನಿಖೆ ವೇಳೆ ಪಬ್‌ನಲ್ಲಿ ಗಲಾಟೆ ನಡೆದಿತ್ತು ಅನ್ನೋ ಮಾಹಿತಿ ಸಹ ಲಭ್ಯವಾಗಿದೆ.
