ಉದಯವಾಹಿನಿ , ನಮ್ಮ ಚರ್ಮಕ್ಕೆ ಹೇಗೆ ಆರೈಕೆ ಮತ್ತು ಪೋಷಣೆ ಮುಖ್ಯವೋ, ಹಾಗೆಯೇ ನಮ್ಮ ಕೂದಲಿನ ಪೋಷಣೆಯೂ ಅತ್ಯಂತ ಅಗತ್ಯ. ಆರೋಗ್ಯಕರ ಕೂದಲು ಪಡೆಯಲು ಪ್ರತೀ ಬಾರಿ ಈ ಬ್ಯೂಟಿ ಪ್ರಾಡಕ್ಟ್ ಗಳಿಗೆ ದುಡ್ಡು ಸುರಿಯಲು ಆಗುವುದಿಲ್ಲ.. ಗಂಟೆ ಗಟ್ಟಲ್ಲೇ ಬ್ಯೂಟಿ ಪಾರ್ಲರ್ ಗೆ ಹೋಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಜೊತೆಗೆ ಇಂದಿನ ಜೀವನಶೈಲಿಯಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆಯಾದರೂ, ಇದಕ್ಕೆ ಸರಿಯಾದ ಪರಿಹಾರ ಹುಡುಕುವುದು ಹಲವರಿಗೆ ಕಷ್ಟಕರವಾಗಿದೆ. ಅಲ್ಲದೇ ನಿರಂತರವಾಗಿ ಕೂದಲು ಉದುರತೊಡಗಿದ್ದಾಗ, ಅದು ಕೂದಲಿನ ಬೆಳವಣಿಗೆಯ ವೇಗವನ್ನು ಕುಗ್ಗಿಸುವುದಷ್ಟೇ ಅಲ್ಲ, ದೈಹಿಕ-ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ತುಸು ಜಾಸ್ತಿಯೇ ಇರಲಿದ್ದು, ಈ ಸಮಸ್ಯೆಗೆ ಇಂದು ನಾವು ಪರಿಹಾರವನ್ನು ಹೊತ್ತು ತಂದಿದ್ದೇವೆ.
ಹೌದು ಮನೆಯಲ್ಲಿಯೇ ಇರುವ ಈ ನೈಸರ್ಗಿಕ ವಸ್ತುಗಳಿಂದ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಬಹುದಾಗಿದ್ದು,ಇದರಿಂದ ಬಲಿಷ್ಠ ಕೇಶರಾಶಿಯನ್ನು ಪಡೆಯುವುದರ ಜೊತೆ ವೆಚ್ಚವೂ ಕಡಿಮೆಯಾಗುತ್ತದೆ.
ಕೋಳಿ ಮೊಟ್ಟೆ ಕೂದಲ ಆರೈಕೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ವಾರಕ್ಕೆ ಒಮ್ಮೆ ಹಸಿ ಕೋಳಿ ಮೊಟ್ಟೆಯ ಲೋಳೆಯನ್ನು ತೆಗೆದುಕೊಂಡು ಪ್ಯಾಕ್ ರೀತಿ ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಆರೋಗ್ಯಯುತವಾಗಿಸುತ್ತವೆ. ಅಗತ್ಯ ವೆನಿಸಿದರೇ ಆಲಿವ್ ಆಯಿಲ್ ಕೂಡ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.
