ಉದಯವಾಹಿನಿ , ನೀವೆಲ್ಲ ಮಶ್ರೂಮ್‌ ಮಂಚೂರಿ , ಗೋಬಿ ಮಂಚೂರಿ ಎಲ್ಲ ತಿಂದೇ ಇರುತ್ತೀರಿ. ಹಾಗೇ ಬಾಳೆಕಾಯಿ ಮಂಚೂರಿ ಸಹ ಸಖತ್‌ ಟೇಸ್ಟ್‌ ಆಗಿರುತ್ತೆ. ಚಳಿಗೆ ಟೀ ಜೊತೆ ಸಕತ್‌ ಕಾಂಬಿನೇಷನ್‌! ಇವತ್ತು ಬಾಳೆಕಾಯಿ ಮಂಚೂರಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಬೇಕಾಗುವ ವಸ್ತುಗಳು, ಬಾಳೆಕಾಯಿ, ಕಾರ್ನ್‌ಫ್ಲೋರ್/ಅಕ್ಕಿ ಹಿಟ್ಟು, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ, ಸಾಸ್ (ಟೊಮೆಟೊ, ಸೋಯಾ)

ಮಾಡುವ ವಿಧಾನ: ಬಾಳೆಕಾಯಿಯನ್ನು ತೊಳೆದು ಸಿಪ್ಪೆ ತೆಗೆಯದೆ ಹದವಾಗಿ ಬೇಯಿಸಿ (ಅಥವಾ ಕುಕ್ಕರ್‌ನಲ್ಲಿ 1 ವಿಷಲ್).‌ ಬಳಿಕ ಬೆಂದ ಬಾಳೆಕಾಯಿಯ ಸಿಪ್ಪೆ ತೆಗೆದು, ಉಪ್ಪು, ಸಕ್ಕರೆ, ಕಾರ್ನ್‌ಫ್ಲೋರ್, ಅಕ್ಕಿ ಹಿಟ್ಟು, ಮೆಣಸಿನ ಪುಡಿ ಸೇರಿಸಿ ಉಂಡೆಗಳನ್ನಾಗಿ ಮಾಡಿ. ನಂತರ ಉಂಡೆಗಳನ್ನು ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಸಾಸ್, ಸೋಯಾ ಸಾಸ್ ಹಾಕಿ ಹುರಿಯಿರಿ. ಕರಿದ ಬಾಳೆಕಾಯಿ ಉಂಡೆಗಳನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಡಿಸುವಾಗ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ, ಟೊಮೆಟೊ ಸಾಸ್ ಜೊತೆ ಸವಿಯಿರಿ.

Leave a Reply

Your email address will not be published. Required fields are marked *

error: Content is protected !!