ಉದಯವಾಹಿನಿ , ನಾವು ಆದಷ್ಟು ರೋಟಿ , ಚಪಾತಿಗಳನ್ನು ನಮ್ಮ ಲಂಚ್ ಬಾಕ್ಸ್‌ಗೆ ಒಯ್ಯುತ್ತೇವೆ. ಅವು ಬಿಸಿಯಾಗಿದ್ದಾಗ ಮೆತ್ತಗೆ ಇರುತ್ತವೆ ಆದರೆ ತಣಿದ ಮೇಲೆ ಗಟ್ಟಿಯಾಗಿಬಿಡುತ್ತದೆ. ಒಮ್ಮೊಮ್ಮೆ ಓವನ್ ಇದ್ದರೆ ಪುನಃ ಬಿಸಿ ಮಾಡಿಕೊಳ್ಳಬಹುದು ಇಲ್ಲದಿದ್ದರೆ ಆ ಗಟ್ಟಿಯಾದ ತಣಿದ ರೋಟಿ, ಚಪಾತಿಯನ್ನೇ ತಿಂದುಕೊಳ್ಳಬೇಕಾಗುತ್ತದೆ. ರೋಟಿ, ಚಪಾತಿಗಳನ್ನು ಲಂಚ್ ಬಾಕ್ಸ್‌ನಲ್ಲೂ ಮೃದುವಾಗಿರಿಸಿಕೊಳ್ಳಬೇಕು ಎಂದಾದರೆ ಕೆಲವೊಂದು ಟಿಪ್ಸ್‌ಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಈ ಕಿಚನ್ ಟಿಪ್ಸ್‌ಗಳು ನಿಮ್ಮ ಸಮಯವನ್ನು ಉಳಿಸುತ್ತವೆ ಹಾಗೂ ರೋಟಿ, ಚಪಾತಿಯನ್ನು ಮೃದುವಾಗಿರಿಸಲು ಸಹಕಾರಿಯಾಗಿವೆ. ಹಾಗಿದ್ದರೆ ಬನ್ನಿ ಆ ಟಿಪ್ಸ್‌ಗಳೇನು ಎಂಬುದನ್ನು ತಿಳಿಯೋಣ. ಈ ಟಿಪ್ಸ್‌ಗಳು ಚಪಾತಿ ಹಿಟ್ಟನ್ನು ಮೃದುವಾಗಿಸಿ ಮೆತ್ತನೆಯ ರೋಟಿಯನ್ನಾಗಿ ಮಾಡುತ್ತದೆ. ಮಧ್ಯಾಹ್ನ ಲಂಚ್ ಬಾಕ್ಸ್‌ಗೂ ನೀವು ಇದನ್ನು ಒಯ್ಯಬಹುದು.
ಹಿಟ್ಟಿಗೆ ಬಿಸಿ ನೀರು ಹಾಕುವುದು.
ಆದಷ್ಟು ಹಿಟ್ಟು ನಾದುವಾಗ ಬಿಸಿ ನೀರನ್ನು ಬಳಸುವುದು ರೋಟಿ, ಚಪಾತಿ ಹಿಟ್ಟನ್ನು ಮೃದುಗೊಳಿಸುತ್ತದೆ ಹಾಗೂ ಇದರಿಂದ ತಯಾರಾದ ಚಪಾತಿ ಕೂಡ ಮೃದುವಾಗಿರುತ್ತದೆ. ಬಿಸಿ ನೀರು ಹಿಟ್ಟನ್ನು ಮೃದುಗೊಳಿಸುತ್ತದೆ ಹಾಗೂ ನಾದುವ ಸಮಯ ಕೂಡ ಕಡಿಮೆಯಾಗುತ್ತದೆ. ಬಿಸಿ ನೀರು ಬಳಸುವುದು ರೋಟಿ, ಚಪಾತಿಗಳನ್ನು ದೀರ್ಘ ಸಮಯದವರೆಗೆ ಮೆತ್ತಗೆ ಇರಿಸುತ್ತದೆ. ಇನ್ನೊಂದು ಟ್ರಿಕ್ ಏನೆಂದರೆ ನಾದುವಾಗ ತುಪ್ಪ ಇಲ್ಲವೇ ಎಣ್ಣೆಯನ್ನು ಬಳಸುವುದು ಅಂಟುವುದನ್ನು ಕಡಿಮೆ ಮಾಡುತ್ತದೆ ಹಾಗೂ ಇದು ಒಣತ್ವವನ್ನು ಕಡಿಮೆ ಮಾಡಿ ಮೃದುತ್ವವನ್ನು ಹಿಟ್ಟಿಗೆ ತರುತ್ತದೆ. ಹಿಟ್ಟು ನಾದಿದ ಮೇಲೆ ತುಪ್ಪ ಇಲ್ಲವೇ ಎಣ್ಣೆಯನ್ನು ಬಳಸಿ ಕೊಂಚ ಹೊತ್ತು ಹಾಗೆಯೇ ಇಡಿ. ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ
ನಾವು ಎಷ್ಟೇ ಟ್ರಿಕ್ಸ್ ಬಳಸಿದರೂ ಹಿಟ್ಟು ನಾದುವುದು ಮುಖ್ಯವಾಗುತ್ತದೆ. ಆದಷ್ಟು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ಹಿಟ್ಟು ಮೆತ್ತಗಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀವು ನಾದಿದಂತೆ ಹಿಟ್ಟು ಸಾಫ್ಟ್ ಆಗುತ್ತದೆ ಹಾಗೂ ಚಪಾತಿ ಕೂಡ ಮೃದುವಾಗುತ್ತದೆ.
ಬಿಸಿ ನೀರು ಹಾಗೂ ತುಪ್ಪ/ಎಣ್ಣೆ ಬಳಸಿ ಚೆನ್ನಾಗಿ ನಾದಿಕೊಳ್ಳಬೇಕು ನಾದುವುದು ಹಿಟ್ಟನ್ನು ಮೃದುಗೊಳಿಸುತ್ತದೆ. ಚಪಾತಿಯನ್ನು ಸಾಫ್ಟ್ ಆಗಿಸುತ್ತದೆ.
