ಉದಯವಾಹಿನಿ , ಚಳಿಗಾಲದಲ್ಲಿ ಸುವರ್ಣ ಗಡ್ಡೆಯನ್ನು ಜನ ಹೆಚ್ಚಾಗಿ ಸೇವಿಸುತ್ತಾರೆ. ಇದು ತಿನ್ನಲು ರುಚಿಕರವಾಗಿರುವುದಷ್ಟೇ ಅಲ್ಲದೇ, ಪೌಷ್ಟಿಕಾಂಶವನ್ನು ಸಹ ಹೊಂದಿದೆ. ಆದರೆ ಎಂದಾದರೂ ನೀವು ಈ ತರಕಾರಿಯಿಂದ ಉಪ್ಪಿನಕಾಯಿ ಮಾಡಿ ಸವಿದಿದ್ದೀರಾ? ಹೌದು, ಸಾಮಾನ್ಯವಾಗಿ ಆಮ್ಲಾ, ನಿಂಬೆ , ಮೆಣಸಿನಕಾಯಿ ಮತ್ತು ಇತರ ಪದಾರ್ಥಗಳಿಂದ ತಯಾರಿಸಿದ ಉಪ್ಪಿನಕಾಯಿಯನ್ನು ಸವಿದಿರುತ್ತೇವೆ. ಆದರೆ ನಾವಿಂದು ನಿಮಗೆ ಸುವರ್ಣ ಗಡ್ಡೆಯಿಂದ ಉಪ್ಪಿನಕಾಯಿ ತಯಾರಿಸುವುದು ಹೇಗೆಂದು ತಿಳಿಸುತ್ತೇವೆ. ಸಾಮಾನ್ಯವಾಗಿ ತರಕಾರಿಯಾಗಿ ತಿನ್ನಲಾಗುವ ಸುವರ್ಣ ಗಡ್ಡೆ ಉಪ್ಪಿನಕಾಯಿ ತಿನ್ನಲು ತುಂಬಾ ರುಚಿಕರವಾಗಿದೆ. ವಿಂಧ್ಯ ಪ್ರದೇಶದ ರೇವಾ, ಸತ್ನಾ, ಸಿದ್ಧಿ ಮತ್ತು ಶಹದೋಲ್‌ನಂತಹ ಅನೇಕ ಜಿಲ್ಲೆಗಳಲ್ಲಿ ಈ ಉಪ್ಪಿನಕಾಯಿಯನ್ನು ಮಹಿಳೆಯರು ಬಹಳ ಇಷ್ಟಪಟ್ಟು ತಯಾರಿಸುತ್ತಾರೆ. ಈ ಉಪ್ಪಿನಕಾಯಿ ಪ್ರಾಚೀನ ಕಾಲದಿಂದಲೂ ಈ ಪ್ರದೇಶದಲ್ಲಿನ ಬಹುತೇಕ ಮನೆಗಳಲ್ಲಿ ಕಂಡು ಬರುತ್ತದೆ. ಇದರ ರುಚಿ ತುಂಬಾ ಅದ್ಭುತವಾಗಿದೆ.
ಸುವರ್ಣ ಗಡ್ಡೆಯನ್ನು ಜನ ಹೆಚ್ಚಾಗಿ ಸೇವಿಸುತ್ತಾರೆ. ಇದು ತಿನ್ನಲು ರುಚಿಕರವಾಗಿರುವುದಷ್ಟೇ ಅಲ್ಲದೇ, ಪೌಷ್ಟಿಕಾಂಶವನ್ನು ಸಹ ಹೊಂದಿದೆ. ಆದರೆ ಎಂದಾದರೂ ನೀವು ಈ ತರಕಾರಿಯಿಂದ ಉಪ್ಪಿನಕಾಯಿ ಮಾಡಿ ಸವಿದಿದ್ದೀರಾ? ಹೌದು, ಸಾಮಾನ್ಯವಾಗಿ ಆಮ್ಲಾ, ನಿಂಬೆ , ಮೆಣಸಿನಕಾಯಿ ಮತ್ತು ಇತರ ಪದಾರ್ಥಗಳಿಂದ ತಯಾರಿಸಿದ ಉಪ್ಪಿನಕಾಯಿಯನ್ನು ಸವಿದಿರುತ್ತೇವೆ. ಆದರೆ ನಾವಿಂದು ನಿಮಗೆ ಸುವರ್ಣ ಗಡ್ಡೆಯಿಂದ ಉಪ್ಪಿನಕಾಯಿ ತಯಾರಿಸುವುದು ಹೇಗೆಂದು ತಿಳಿಸುತ್ತೇವೆ. ಸಾಮಾನ್ಯವಾಗಿ ತರಕಾರಿಯಾಗಿ ತಿನ್ನಲಾಗುವ ಸುವರ್ಣ ಗಡ್ಡೆ ಉಪ್ಪಿನಕಾಯಿ ತಿನ್ನಲು ತುಂಬಾ ರುಚಿಕರವಾಗಿದೆ. ವಿಂಧ್ಯ ಪ್ರದೇಶದ ರೇವಾ, ಸತ್ನಾ, ಸಿದ್ಧಿ ಮತ್ತು ಶಹದೋಲ್‌ನಂತಹ ಅನೇಕ ಜಿಲ್ಲೆಗಳಲ್ಲಿ ಈ ಉಪ್ಪಿನಕಾಯಿಯನ್ನು ಮಹಿಳೆಯರು ಬಹಳ ಇಷ್ಟಪಟ್ಟು ತಯಾರಿಸುತ್ತಾರೆ. ಈ ಉಪ್ಪಿನಕಾಯಿ ಪ್ರಾಚೀನ ಕಾಲದಿಂದಲೂ ಈ ಪ್ರದೇಶದಲ್ಲಿನ ಬಹುತೇಕ ಮನೆಗಳಲ್ಲಿ ಕಂಡು ಬರುತ್ತದೆ. ಇದರ ರುಚಿ ತುಂಬಾ ಅದ್ಭುತವಾಗಿದೆ.
ಇನ್ನೂ ಈ ಬಗ್ಗೆ ಲೋಕಲ್18 ಜೊತೆ ಮಾತನಾಡಿದ ತಜ್ಞ ಡಾ. ಆರ್.ಪಿ. ಪರೋಹ, ಸುವರ್ಣ ಗಡ್ಡೆ ಉಪ್ಪಿನಕಾಯಿ ಹೆಚ್ಚು ಜೀರ್ಣಕಾರಿ ಮತ್ತು ಸಂಕೋಚಕ ಎಂದು ಪರಿಗಣಿಸಲಾಗಿದೆ. ಈ ಉಪ್ಪಿನಕಾಯಿ ತಿನ್ನಲು ರುಚಿಯಾಗಿರುವುದಷ್ಟೇ ಅಲ್ಲದೇ, ಮೂಲವ್ಯಾಧಿ ರೋಗಿಗಳಿಗೆ ಅಮೃತದಂತಿದೆ. ಹೊಟ್ಟೆಗೆ ಸಂಬಂಧಿಸಿದ ಔಷಧಿಗಳಲ್ಲಿ ಸುವರ್ಣಗಡ್ಡೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಉರಿಯೂತವನ್ನು ನಿವಾರಿಸುತ್ತದೆ ಮತ್ತು ಉಪ್ಪಿನಕಾಯಿಯಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಿಸುತ್ತದೆ.
