ಉದಯವಾಹಿನಿ, ನಾಯ್ಪಿಡೋ: ಆಸ್ಪತ್ರೆಯ ಮೇಲೆ ಮಿಲಿಟರಿ ಜಂಟಾ ನಡೆಸಿದ ವೈಮಾನಿಕ ದಾಳಿಯಲ್ಲಿ 31 ಜನರು ಮೃತಪಟ್ಟು, 68 ಮಂದಿ ಮೃತಪಟ್ಟ ದಾರುಣ ಘಟನೆ ಮಯನ್ಮಾರ್‌ನಲ್ಲಿ ನಡೆದಿದೆ. 2021ರ ದಂಗೆಯಲ್ಲಿ ಸೇನೆಯು ಅಧಿಕಾರವನ್ನು ಕಸಿದುಕೊಂಡ ನಂತರ ಸೇನೆಯು ವರ್ಷದಿಂದ ವರ್ಷಕ್ಕೆ ವಾಯುದಾಳಿಗಳನ್ನು ಹೆಚ್ಚಿಸಿದೆ. ಈ ಘಟನೆ ರಾಷ್ಟ್ರದಲ್ಲಿ ನಡೆಯುತ್ತಿರುವ ಮಾನವೀಯ ಸಂಕಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಪರಿಸ್ಥಿತಿ ತುಂಬಾ ಭಯಾನಕವಾಗಿದೆ. 31 ಸಾವುಗಳು ಸಂಭವಿಸಿವೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪಶ್ಚಿಮ ರಾಖೈನ್ ರಾಜ್ಯದ ಮ್ರೌಕ್-ಯು ಪಟ್ಟಣದ ಸಾಮಾಜಿಕ ಕಾರ್ಯಕರ್ತ ವೈ ಹುನ್ ಆಂಗ್ ಹೇಳಿದ್ದಾರೆ. ಮಯನ್ಮಾರ್ ಸೇನೆಯು ಡಿಸೆಂಬರ್ 28ರಂದು ಚುನಾವಣೆ ಮಾಡುವುದಾಗಿ ಘೋಷಿಸಿದೆ. ಹೋರಾಟವನ್ನು ಅಂತ್ಯಗೊಳಿಸುವ ಒಂದು ಮಾರ್ಗವೇ ಈ ಚುನಾವಣೆ ಎಂದು ಅದು ಹೇಳಿದೆ. ಆದರೆ, ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಮತದಾನವನ್ನು ತಡೆಯುವುದಾಗಿ ಬಂಡುಕೋರರು ಪ್ರತಿಜ್ಞೆ ಮಾಡಿಕೊಂಡಿದ್ದು, ಆ ಪ್ರದೇಶಗಳನ್ನು ಮರಳಿ ಕಬಳಿಸಲು ಸೇನೆ ತೀವ್ರ ಯುದ್ಧ ಮಾಡುತ್ತಿದೆ. ಡಿಸೆಂಬರ್ 5ರಂದು ರಾತ್ರಿ 8 ಗಂಟೆಯ ನಂತರ ಟಬಾಯಿನ್ ತಾಲ್ಲೂಕಿನ ಮಯಾಕನ್ ಗ್ರಾಮದ ಒಂದು ಚಹಾ ಅಂಗಡಿಯ ಮೇಲೆ ದಾಳಿ ನಡೆಯಿತು. ಮಯನ್ಮಾರ್‌ನ ಎರಡನೇ ಅತಿ ದೊಡ್ಡ ನಗರವಾದ ಮಂಡಲೇಯಿಂದ ಸುಮಾರು 120 ಕಿಲೋಮೀಟರ್ (75 ಮೈಲಿ) ವಾಯುವ್ಯಕ್ಕೆ ಇರುವ ಈ ಗ್ರಾಮ, ಡೆಪಾಯಿನ್ ಎಂಬ ತನ್ನ ಹಳೆಯ ಹೆಸರಿನಿಂದಲೇ ಹೆಚ್ಚು ಪರಿಚಿತವಾಗಿದೆ.
ದಾಳಿ ನಡೆದ ಸ್ಥಳಕ್ಕೆ ಸಂತ್ರಸ್ತರಿಗೆ ಸಹಾಯ ಮಾಡಲು ಗ್ರಾಮಸ್ಥರು ಧಾವಿಸಿದರು. ಈ ವೇಳೆ ಅಲ್ಲಿನ ಕರಾಳ ಸ್ಥಿತಿಯನ್ನು ಬಿಚ್ಚಿಟ್ಟರು. ಟೀ ಅಂಗಡಿಯಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ ಐದು ವರ್ಷದ ಮಗು ಮತ್ತು ಇಬ್ಬರು ಶಾಲಾ ಶಿಕ್ಷಕರಿದ್ದರು ಎಂದು ತಿಳಿಸಿದ್ದರು. ಆ ಸ್ಥಳದಲ್ಲಿ ಮಯನ್ಮಾರ್ ಮತ್ತು ಫಿಲಿಪೈನ್ಸ್ ನಡುವಿನ ಫುಟ್ಬಾಲ್ ಪಂದ್ಯಾವಳಿಯನ್ನು ದೂರದರ್ಶನದಲ್ಲಿ ವೀಕ್ಷಿಸಲು ಹಲವಾರು ಜನರು ಸೇರಿದ್ದರು.
