ಉದಯವಾಹಿನಿ, ಬ್ಯಾಂಕಾಕ್: ಇತ್ತೀಚಿಗೆ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ 25 ಜನರನ್ನು ಬಲಿ ಪಡೆದಿದ್ದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ಘಟನೆ ನಡೆದ ಬಳಿಕ ತಲೆಮರಿಸಿಕೊಂಡು ಥೈಲ್ಯಾಂಡ್‌ಗೆ ಹಾರಿ ತಲೆಮರಿಸಿಕೊಂಡಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಇದೀಗ ಲಾಕ್ ಆಗಿದ್ದು, ಮರಳಿ ಭಾರತಕ್ಕೆ ಕೆರೆತರುವ ಕೆಲಸವಾಗುತ್ತಿದೆ. ಥೈಲ್ಯಾಂಡ್ ಅಧಿಕಾರಿಗಳು ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಈ ಇಬ್ಬರನ್ನು ಈಗಾಗಲೇ ಬಂಧಿಸಿ ಬ್ಯಾಂಕಾಕ್ ವಲಸೆ ಕಛೇರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಅರ್ಪೋರಾದಲ್ಲಿ ಬೆಂಕಿಗಾಹುತಿಯಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ ಕ್ಲಬ್ ಸಹಮಾಲೀಕರಾದ ಸೌರವ್ ಲೂಥ್ರಾ ಹಾಗೂ ಗೌರವ್ ಲೂಥ್ರಾ ಇಂಡಿಗೋ ವಿಮಾನದಲ್ಲಿ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದರು. ಅದಾದ ಬಳಿಕ ಥೈಲ್ಯಾಂಡ್ ಪೊಲೀಸರು ಅವರನ್ನು ಪಾಟಾಂಗ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಪತ್ತೆ ಹಚ್ಚಿದರು. ತಮ್ಮ ವಿದೇಶ ಪ್ರಯಾಣ ದಾಖಲೆಗಳನ್ನು ಉಳಿಸಿಕೊಳ್ಳಲು ಸಮರ್ಥನೆ ಕೋರಿ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿ ತಿರಸ್ಕೃತವಾದ ಬಳಿಕ ದೆಹಲಿಯ ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯು ಪಾಸ್‌ಪೋರ್ಟ್‌ಗಲನ್ನು ಅಮಾನತುಗೊಳಿಸಿತು. ಬಳಿಕ ಥೈಲ್ಯಾಂಡ್ ಪೊಲೀಸರು ಪ್ರಯಾಣ ದಾಖಲೆಗಳನ್ನು ಬಳಸಿಕೊಂಡು ಈ ಇಬ್ಬರನ್ನು ಪತ್ತೆ ಮಾಡಿ ಅವರ ಬಳಿ ಇದ್ದ ವಸ್ತುಗಳನ್ನೆಲ್ಲಾ ವಶಕ್ಕೆ ಪಡೆದು ಅಲ್ಲಿನ ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಛೇರಿಗೆ ಕರೆದೊಯ್ಯಲಾಗಿದೆ.
