ಉದಯವಾಹಿನಿ, ಇಸ್ಲಾಮಾಬಾದ್ : ಪಾಕಿಸ್ತಾನದ ಇಂಟರ್- ಸರ್ವಿಸಸ್ ಇಂಟೆಲಿಜೆನ್ಸ್‌(ಐಎಸ್‌ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಗೆ ಗುರುವಾರ ಮಿಲಿಟರಿ ನ್ಯಾಯಾಲಯ 14 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳಲ್ಲಿ ಹಮೀದ್ ಗೆ ಶಿಕ್ಷೆ ವಿಧಿಸಿರುವುದಾಗಿ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ನ ಹೇಳಿಕೆ ತಿಳಿಸಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟ ವಲಯದಲ್ಲಿ ಗುರುತಿಸಿಕೊಂಡಿದ್ದ ಹಮೀದ್‌ರನ್ನು ಕಳೆದ ವರ್ಷ `ಟಾಪ್ ಸಿಟಿ ಯೋಜನೆ’ಯ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. 2019ರಲ್ಲಿ ಆಸಿಮ್ ಮುನೀರ್ ರನ್ನು (ಪ್ರಸ್ತುತ ಪಾಕ್ ಸೇನಾ ಮುಖ್ಯಸ್ಥು ಪದಚ್ಯುತಗೊಳಿಸಿ ಹಮೀದ್‌ರನ್ನು ನೇಮಕಗೊಳಿಸಿದ್ದು ಅವರು 2021ರವರೆಗೆ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!