ಉದಯವಾಹಿನಿ, ವಾಷಿಂಗ್ಟನ್ : ಈಗ ನಡೆಯುತ್ತಿರುವ ಯುದ್ಧದ ವಾಸ್ತವಿಕತೆಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝಲೆನ್‌ಸ್ಕಿ ಅರಿತುಕೊಳ್ಳಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದು ಮುಂದಿನ ಚುನಾವಣೆಯನ್ನು ಯಾವಾಗ ನಡೆಸಲು ಬಯಸಿದ್ದೀರಿ ಎಂದು ಝಲೆನ್‌ಸ್ಕಿಯನ್ನು ಪ್ರಶ್ನಿಸಿದ್ದಾರೆ.
ರಶ್ಯದೊಂದಿಗಿನ ಯುದ್ಧದಲ್ಲಿ ತನ್ನ ಸ್ಥಿತಿಯ ಬಗ್ಗೆ ಉಕ್ರೇನ್ ಮರುಪರಿಶೀಲನೆ ನಡೆಸಬೇಕು ಮತ್ತು ಅಧ್ಯಕ್ಷ ಝಲೆನ್ ವಾಸ್ತವಿಕತೆಯನ್ನು ಅರಿತುಕೊಳ್ಳಬೇಕು. ಅವರು ಚುನಾವಣೆಯನ್ನು ಯಾವಾಗ ನಡೆಸುತ್ತಾರೆ ಎಂದು ತಿಳಿಯಬೇಕಿದೆ.
ಯುರೋಪಿಯನ್ ನಾಯಕರು ಈ ವಾರಾಂತ್ಯ ಅಮೆರಿಕಾ ಮತ್ತು ಉಕ್ರೇನ್ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಬಯಸಿದ್ದಾರೆ. ಉಕ್ರೇನ್ ನಾಯಕರ ಜೊತೆಗಿನ ಮಾತುಕತೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ನಾವು ಆಸಕ್ತರಾಗಿದ್ದೇವೆ’ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
