ಉದಯವಾಹಿನಿ,  ಶ್ರೀನಗರ (ಜಮ್ಮು): ಅಮರನಾಥ ಯಾತ್ರಿಕರ 15ನೇ ಬ್ಯಾಚ್‌ನ 6,200ಕ್ಕೂ ಹೆಚ್ಚು ಭಕ್ತಾದಿಗಳು ಬಿಗಿ ಭದ್ರತೆಯೊಂದಿಗೆ ಸೋಮವಾರ ಮುಂಜಾನೆ ಭಗವತಿ ನಗರ ಶಿಬಿರದಿಂದ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3,880 ಮೀಟರ್‌ ಎತ್ತರದ ಗುಹೆಯಲ್ಲಿರುವ ಶಿವಲಿಂಗ ದರ್ಶನ ಪಡೆಯಲು ಒಟ್ಟು 6,648 ಯಾತ್ರಾರ್ಥಿಗಳು 241 ವಾಹನಗಳ ಬೆಂಗಾವಲು ಪಡೆಯ ಜೊತೆಗೆ ಕಾಶ್ಮೀರದ ಅವಳಿ ಬೇಸ್‌ ಕ್ಯಾಂಪ್‌ಗಳಿಂದ ಪ್ರಯಾಣ ಕೈಗೊಂಡಿದ್ದಾರೆ.     ಸುಮಾರು 3,686 ಯಾತ್ರಾರ್ಥಿಗಳು 132 ವಾಹನಗಳ ಕಾವಲು ಪಡೆಯೊಂದಿಗೆ ಬೆಳಗಿನ ಜಾವ 3.30ರ ಸುಮಾರಿಗೆ ಪಹಾಲ್ಗಂಗೆ ತೆರಳಿದ್ದು, ಉಳಿದ 2,998 ಯಾತ್ರಾರ್ಥಿಗಳನ್ನು ಹೊತ್ತ 109 ವಾಹನಗಳ ಮತ್ತೊಂದು ಬೆಂಗಾವಲು ಪಡೆಯು ಬೆಳಿಗ್ಗೆ 3.45ಕ್ಕೆ ಬಾಲ್‌ಟಾಲ್‌ ಬೇಸ್‌ ಕ್ಯಾಂಪ್‌ಗೆ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 1ರಿಂದ ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭಗೊಂಡಿದ್ದು, ಇದುವರೆಗೆ ಸುಮಾರು 2,29,221 ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. 62 ದಿನಗಳ ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 1 ರಂದು ಅನಂತನಾಗ್‌ ಜಿಲ್ಲೆಯ ಪಹಾಲ್ಗಂ ಮತ್ತು ಗಂದರ್‌ಬಾಲ್‌ ಜಿಲ್ಲೆಯ ಬಾಲ್‌ಟಾಲ್‌ ಅವಳಿ ಟ್ರ್ಯಾಕ್‌ಗಳಿಂದ ಪ್ರಾರಂಭಗೊಂಡಿದ್ದು, ಆಗಸ್ಟ್‌ 31 ರಂದು ಮುಕ್ತಾಯಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!