ಉದಯವಾಹಿನಿ , ನವದೆಹಲಿ: ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೌರವ ಸಮನ ಸಲ್ಲಿಸಿದರು. ಗಾಂಧಿ ಅವರ ‘ಸ್ವದೇಶಿ’ ಕರೆಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೂಲಭೂತ ತತ್ವವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿಯವರು ಯಾವಾಗಲೂ ಸ್ವದೇಶಿಗೆ ಬಲವಾದ ಒತ್ತು ನೀಡುತ್ತಿದ್ದರು. ಇದು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಸರ್ಕಾರದ ಸಂಕಲ್ಪದ ಮೂಲಭೂತ ಆಧಾರ ಸ್ತಂಭವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ನನ್ನ ಗೌರವಗಳು. ಅವರ ವ್ಯಕ್ತಿತ್ವ ಮತ್ತು ಕಾರ್ಯಗಳು ದೇಶದ ಜನರನ್ನು ಕರ್ತವ್ಯದ ಹಾದಿಯಲ್ಲಿ ನಡೆಯಲು ಸದಾ ಪ್ರೇರೇಪಿಸುತ್ತಲೇ ಇರುತ್ತವೆ ಎಂದಿದ್ದಾರೆ. ಮತ್ತೊಂದು ಪೋಸ್ಟ್​ನಲ್ಲಿ, ಅಹಿಂಸೆಯ ತತ್ವವನ್ನು ಶ್ಲಾಘಿಸಿರುವ ಮೋದಿ, ಬಾಪು ಯಾವಾಗಲೂ ಮಾನವೀಯತೆಯ ರಕ್ಷಣೆಗಾಗಿ ಅಹಿಂಸೆಯನ್ನು ಒತ್ತಿ ಹೇಳುತ್ತಿದ್ದರು. ಶಸ್ತ್ರಾಸ್ತ್ರವಿಲ್ಲದೆ ಜಗತ್ತನ್ನು ಬದಲಾಯಿಸಬಲ್ಲ ಶಕ್ತಿ ಅದರಲ್ಲಿದೆ. ಅಹಿಂಸಾ ಪರಮ ಧರ್ಮಸ್ತ-ಥಾಹಿಂಸಾ ಪರಂತಪಃ, ಅಹಿಂಸಾ ಪರಮಂ ಸತ್ಯಂ ಯತೋ ಧರ್ಮಃ ಪ್ರವರ್ತತೇ (ಅಹಿಂಸೆಯೇ ಅಂತಿಮ ಕರ್ತವ್ಯ, ಅಹಿಂಸೆಯೇ ಅಂತಿಮ ತಪಸ್ಸು. ಅಹಿಂಸೆಯೇ ಅಂತಿಮ ಸತ್ಯ, ಮತ್ತು ಅದು ಸದಾಚಾರದ ಉದ್ದೇಶವನ್ನು ಮುನ್ನಡೆಸುತ್ತದೆ) ಎಂದು ತಿಳಿಸಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧಿಯವರ ಸ್ಮರಣೆ ಮಾಡಿದ್ದು, ದೇಶವನ್ನು ಬೇರ್ಪಡಿಸಿದ ದ್ವೇಷವನ್ನು ಗಾಂಧಿಯವರ ಮಾರ್ಗದಲ್ಲಿ ಮಾತ್ರ ಎದುರಿಸಲು ಸಾಧ್ಯ. ಬಾಪು ಅವರ ಸ್ವಂತ ಮಾರ್ಗ, ಸತ್ಯದ ಬೆಳಕು, ಅಹಿಂಸೆಯ ಶಕ್ತಿ ಮತ್ತು ಪ್ರೀತಿಯ ಕರುಣೆ ಇದರಲ್ಲೇ ಅಡಗಿದೆ. ಹುತಾತ್ಮರ ದಿನದಂದು ರಾಷ್ಟ್ರಪಿತನಿಗೆ ಗೌರವಗಳು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!