ಉದಯವಾಹಿನಿ, ನವದೆಹಲಿ: ಅಪರೂಪದ ಬೆಳವಣಿಗೆಯಲ್ಲಿ ದೆಹಲಿ ವಾಯುಮಾಲಿನ್ಯ ಬಗ್ಗೆ ಚರ್ಚೆಗೆ ರಾಹುಲ್ ಗಾಂಧಿ (Rahul Gandhi) ಮನವಿಗೆ ಮೋದಿ ಸರ್ಕಾರ ಸಮ್ಮತಿ ಸೂಚಿಸಿದೆ.
ಶೂನ್ಯವೇಳೆಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಸ್ಪಷ್ಟ ಚಿತ್ರಣ ಮುಂದಿಟ್ಟ ರಾಹುಲ್ ಗಾಂಧಿ ಲಕ್ಷಾಂತರ ಮಕ್ಕಳು ಶ್ವಾಸಕೋಶದ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ವೃದ್ಧರು ಉಸಿರಾಡಲು ಕಷ್ಟಪಡುತ್ತಿದ್ದಾರೆ ಎಂದು ಸದನದ ಗಮನ ಸೆಳೆದರು. ಇದು ಸೈದ್ಧಾಂತಿಕ ವಿಷಯವಲ್ಲ, ಮಾಲಿನ್ಯದ ವಿಚಾರ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಕಿರಣ್ ರಿಜಿಜು , ಸರ್ಕಾರವು ಈ ವಿಷಯದ ಕುರಿತು ಚರ್ಚೆಗೆ ಸಿದ್ಧವಾಗಿದೆ. ಲೋಕಸಭಾ ವ್ಯವಹಾರ ಸಲಹಾ ಸಮಿತಿಯಲ್ಲಿಯೂ ಗಮನಕ್ಕೆ ತರಲಾಗಿದೆ ಎಂದರು. ಇನ್ನೂ ತಮಿಳುನಾಡಿನ ಕಾರ್ತಿಕ ದೀಪ ವಿಷಯವನ್ನ ಲೋಕಸಭೆಯಲ್ಲಿ ಸಂಸದ ಅನುರಾಗ್ ಠಾಕೂರ್ ಪ್ರಸ್ತಾಪಿಸಿದರು. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇತ್ತೀಚೆಗೆ ತಮಿಳುನಾಡು ಸರ್ಕಾರವನ್ನು ಛೀಮಾರಿ ಹಾಕಿದೆ. ಪೊಲೀಸರು ಹೈಕೋರ್ಟ್ ಆದೇಶಗಳನ್ನು ಏಕೆ ಪಾಲಿಸಲಿಲ್ಲ? ಹಿಂದೂಗಳನ್ನ ಏಕೆ ತಡೆಯಲಾಯಿತು? ತಮಿಳುನಾಡು ಸರ್ಕಾರ ಹೈಕೋರ್ಟ್ ನಿರ್ದೇಶನವನ್ನ ಪಾಲಿಸಿಲ್ಲ ಎಂದು ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!