
ಉದಯವಾಹಿನಿ, ಚಂಡೀಗಢ : ಪಂಜಾಬ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರಾಧ್ಯಾಪಕರೊಬ್ಬರ ಪತ್ನಿಯ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯು ನಿಧಾನವಾಗಿ ಮತ್ತು ಆಗಾಗ ನಿಲ್ಲುತ್ತಾ ಸಾಗಿದ್ದರೂ, ಈಗ ಹೈಟೆಕ್ ತಂತ್ರಜ್ಞಾನದ ಮೂಲಕ ಕೊನೆಗೂ ಆ ರಹಸ್ಯ ಬಯಲಾಗಿದೆ. ಈ ಕೊಲೆಗೆ ಮಹಿಳೆಯ ಪತಿ, ಪ್ರಾಧ್ಯಾಪಕನೇ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಪ್ರೊಫೆಸರ್ ಬಿಬಿ ಗೋಯಲ್ ಪೊಲೀಸರು ಬಂಧಿಸಿದ್ದಾರೆ. 2021ರ ನವೆಂಬರ್‌ನಲ್ಲಿ ದೀಪಾವಳಿಯ ದಿನ ಅವರ ಪತ್ನಿ ಸೀಮಾ ಗೋಯಲ್ ಮೃತದೇಹ ಪತ್ತೆಯಾಗಿತ್ತು. ಅವರು ಕೊಲೆಯಾದ ನಾಲ್ಕು ವರ್ಷದ ನಂತರ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹಿಣಿಯಾಗಿದ್ದ ಸೀಮಾ ಗೋಯಲ್ ಅವರ ಹತ್ಯೆ ಪ್ರಕರಣದಲ್ಲಿ, ಪ್ರೊಫೆಸರ್ ಗೋಯಲ್ ಅವರ ಬ್ರೇನ್–ಮ್ಯಾಪಿಂಗ್ ಪರೀಕ್ಷೆಯಲ್ಲಿ ಕಂಡುಬಂದ ಕೆಲವು ಮಾದರಿಗಳು, ಅವರನ್ನು ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.
ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಪೊಲೀಸರು, ಸಾಮಾನ್ಯವಾಗಿ ಬ್ರೇನ್–ಮ್ಯಾಪಿಂಗ್ ಎಂದು ಕರೆಯಲಾಗುವ ಬ್ರೇನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೇಚರ್ ತಂತ್ರಜ್ಞಾನವನ್ನು ಕೊಲೆ ಪ್ರಕರಣವೊಂದರಲ್ಲಿ ಬಳಸಿರುವುದು ಇದೇ ಮೊದಲು ಎನ್ನಲಾಗಿದೆ.
