ಉದಯವಾಹಿನಿ, ಬಿ.ಸಿದ್ದಲಿಂಗಯ್ಯ ಅವರು ನಿರ್ಮಿಸುತ್ತಿರುವ ಹಾಗೂ ಎಸ್.ಪ್ರದೀಪ್ ವರ್ಮ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ನಿಖಿಲ್ ರಾಜ್ ಶೆಟ್ಟಿ ಬರೆದಿರುವ, ಚೇತನ್ ಗಂಧರ್ವ ಹಾಡಿರುವ ಹಾಗೂ ಪ್ರದೀಪ್ ವರ್ಮ ಸಂಗೀತ ನೀಡಿರುವ “ಮನಸ್ಸು ಏನೋ ಕಾಡಿದೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸುಮಧುರ ಗೀತೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಗುರುಗಳಾದ ಚಿಂತಲಪಲ್ಲಿ ಶ್ರೀನಿವಾಸ ಹಾಡು ಬಿಡುಗಡೆ ಮಾಡಿ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಟನೆ ಬಗ್ಗೆ ಆಸಕ್ತಿಯುಳ್ಳ ಅದ್ವಿಕ್ ಈ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಅಡಿ ಇಡುತ್ತಿದ್ದಾರೆ. ಅವರ ತಂದೆ ಸಿದ್ದಲಿಂಗಯ್ಯ ಅವರೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ತಾಯಿ ಅಕ್ಕಮಹಾದೇವಿ ಅವರು ಕಥೆ ಬರೆದಿದ್ದಾರೆ. ಮಗನ ಆಸೆಗೆ ಅಪ್ಪ – ಅಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಅಕ್ಕಮಹಾದೇವಿಯ ಅವರು ಖ್ಯಾತ ಲೇಖಕಿ ಟಿ.ಗಿರಿಜಾ ಅವರ ಸಹೋದರಿ. ನೈಜ ಕಥೆ ಆದರಿಸಿದ ಈ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ಪ್ರೇಮಕಥೆಯೇ ಪ್ರಧಾನವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಯ “ಪ್ರೇಮಿ” ಚಿತ್ರದಲ್ಲಿದೆ. ಜ್ಯೋತಿಷ್ಯದ ಕುರಿತದ ವಿಷಯವೂ ಇದರಲ್ಲಿದೆ. ಐದು ಹಾಡುಗಳ ಪೈಕಿ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ನಾನೇ ಸಂಗೀತ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿದ್ದೇನೆ. ಖಳನಾಯಕನಾಗೂ ಅಭಿನಯಿಸಿದ್ದೇನೆ ಎಂದು ಪ್ರದೀಪ್ ವರ್ಮ ಹೇಳಿದರು.
