ಉದಯವಾಹಿನಿ, ಕಠ್ಮಂಡು: ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವರು ತಮ್ಮ ಸಂಪುಟಕ್ಕೆ ನಾಲ್ವರು ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರಿಂದ ಸಚಿವ ಸಂಪುಟದ ಬಲ 14ಕ್ಕೆ ಏರಿದೆ.
ಅಧ್ಯಕ್ಷರ ಕಚೇರಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಶ್ರದ್ಧಾ ಶ್ರೇಷ್ಠಾ, ಮಾಧವ್ ಚೌಲಗೈನ್, ರಾಜೇಂದ್ರ ಸಿಂಗ್ ಭಂಡಾರಿ ಮತ್ತು ಕುಮಾರ್ ಇಂಗ್ನಮ್ ಅವರಿಗೆ ಅಧ್ಯಕ್ಷ ರಾಮಚಂದ್ರ ಪೌದೆಲ್ ಅವರು ಪ್ರಮಾಣ ವಚನ ಬೋಧಿಸಿದರು.
ಶ್ರದ್ಧಾ ಶ್ರೇಷ್ಠಾ ಅವರಿಗೆ ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಖಾತೆ, ಮಾಧವ್ ಚೌಲಗೈನ್ ಅವರಿಗೆ ಅರಣ್ಯ ಮತ್ತು ಪರಿಸರ, ರಾಜೇಂದ್ರ ಸಿಂಗ್ ಭಂಡಾರಿ ಅವರಿಗೆ ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ, ಕುಮಾರ್ ಇಂಗ್ನಮ್ ಅವರಿಗೆ ಭೂ ನಿರ್ವಹಣೆ, ಸಹಕಾರಿ ಮತ್ತು ಬಡತನ ನಿರ್ಮೂಲನೆ ಖಾತೆ ನೀಡಲಾಗಿದೆ.
ಸಮಾರಂಭದಲ್ಲಿ ಉಪಾಧ್ಯಕ್ಷ ರಾಮಸಹಾಯ್ ಪ್ರಸಾದ್ ಯಾದವ್, ಸುಶೀಲಾ ಕಾರ್ಕಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ಮಾನ್ ಸಿಂಗ್ ರಾವತ್ ಭಾಗವಹಿಸಿದ್ದರು.
