ಉದಯವಾಹಿನಿ, ಬ್ರೆಜಿಲ್ : ಭಾರತದಲ್ಲಿ ಗಾಂಧೀಜಿ, ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಗೌರವ ದೊರೆಯುತ್ತದೆ. ಬಹುತೇಕ ಸರಕಾರಿ ಕಟ್ಟಡ, ಉದ್ಯಾನವನ, ಮೈದಾನ, ಗ್ರಂಥಾಲಯದಲ್ಲಿ ಇವರ ಪ್ರತಿಮೆಗಳು ಕಾಣಸಿಗುತ್ತವೆ. ಪ್ರತಿ ದೇಶದಲ್ಲಿಯೂ ಮಹಾನ್ ವ್ಯಕ್ತಿಗಳು ಪ್ರತಿಮೆಗಳಿವೆ. ಇದೀಗ ಬ್ರೆಜಿಲ್ ಪ್ರಸಿದ್ಧ ಸ್ಟ್ಯಾಚು ಆಫ್ ಲಿಬರ್ಟಿ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಕುಸಿದು ಬಿದ್ದಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಕ್ಷಿಣ ಬ್ರೆಜಿನಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ ಬಿರುಗಾಳಿ ರಭಸಕ್ಕೆ ಕುಸಿದು ಬಿದ್ದಿದೆ. ದಕ್ಷಿಣ ಬ್ರೆಜಿಲ್‌ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದ್ದ ಪರಿಣಾಮ 24 ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ. ಅಮೆರಿಕದ ಲಿಬರ್ಟಿ ಪ್ರತಿಮೆ ಕುಸಿದು ಬಿದ್ದಿರುವುದಾಗಿ ಬಹುತೇಕರು ಅಂದುಕೊಂಡಿದ್ದರು. ಬಳಿಕ ಇದು ಬ್ರೆಜಿಲ್‌ನ ಪ್ರತಿಮೆ ಎಂದು ಖಾತರಿಯಾಗಿದೆ.
ಡಿ.15ರಂದು ದಕ್ಷಿಣ ಬ್ರೆಜಿಲ್‌ನಲ್ಲಿ 90 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ಪರಿಣಾಮ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನ ಗುವಾಯ್ಬಾದಲ್ಲಿರುವ ಹವಾನ್‌ನ ಮೆಗಾಸ್ಟೋರ್‌ನ ಹೊರಗೆ ಸ್ಥಾಪಿಸಲಾದ 24 ಮೀಟರ್ ಎತ್ತರದ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ ಧರೆಗುರುಳಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
