ಉದಯವಾಹಿನಿ, ಬಿಗ್‌ಬಾಸ್ ಮನೆಯ ಸೀಕ್ರೇಟ್ ರೂಂನಲ್ಲಿರುವ ಧ್ರುವಂತ್ ಹಾಗೂ ರಕ್ಷಿತಾ ಇದೀಗ ಭಾರಿ ಜಗಳ ಮಾಡಿಕೊಂಡಿದ್ದಾರೆ. ದುರಂತ ಅಂದ್ರೆ ಇವರಿಬ್ಬರ ಜಗಳ ಬಿಡಿಸೋಕೆ ಕೂಡ ಅಲ್ಲಿ ಮೂರನೇ ವ್ಯಕ್ತಿ ಇಲ್ಲ. ಒಂದೇ ಕೋಣೆಯಲ್ಲಿರುವ ಧ್ರುವಂತ್ ಹಾಗೂ ರಕ್ಷಿತಾ ಪರಸ್ಪರ ಕ್ಯಾರೆಕ್ಟರ್ ಜರಿದುಕೊಂಡು ಕಿತ್ತಾಡಿಕೊಂಡಿದ್ದಾರೆ.
ಧ್ರುವಂತ್‌ಗೆ ರಕ್ಷಿತಾ ಇಷ್ಟು ಸ್ಟೈಲ್ ಯಾಕ್ ಮಾಡ್ತೀರಾ ಎಂದು ಕೇಳ್ತಾರೆ. ಅದಕ್ಕೆ ಧ್ರುವಂತ್ ಯಾಕಂದ್ರೆ ನಾನು ನನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಬಳಿಕ ಬಿಗ್‌ಬಾಸ್ ಕೂಡ ಥಿಂಕ್ ಮಾಡ್ತಿದ್ದಾರೆ ನಿಮ್ಮನ್ನು ಸೀಕ್ರೆಟ್ ರೂಂನಲ್ಲಿ ಇಟ್ಟಿದ್ದು ತಪ್ಪಾಯ್ತು ಅಂತಾರೆ ರಕ್ಷಿತಾ. ಬಳಿಕ ಧ್ರುವಂತ್ ನಿನ್ನ ಆಟಿಟ್ಯೂಡ್, ನೀನು ಬಿಹೇವ್ ಮಾಡುವ ರೀತಿ ಹಾಗೂ ಏನೇ ಹೇಳಿದ್ರೂ ಹ್ಹ ಹ್ಹಾ ಅನ್ನೋದು ಎಂದು ಕಾಲೆಳೆಯುತ್ತಾರೆ. ಅದಕ್ಕೆ ಕೋಪಗೊಳ್ಳುವ ರಕ್ಷಿತಾ ನೀನು ರಕ್ಷಿತಾ ಆರ್‌ಗೂ ಕೂಡ ಸಮ ಇಲ್ಲ ಎನ್ನುತ್ತಾರೆ. ಅದಕ್ಕೆ ಧ್ರುವಂತ್ ನೀವು ನನ್ನ ಎಂದು ಕಾಲನ್ನ ನೆಲಕ್ಕೆ ಹೊಸೆಯುತ್ತಾ ಇದಕ್ಕೂ ಸಮವಿಲ್ಲ ಎನ್ನುತ್ತಾರೆ. ಹೀಗೆ ಸಿಕ್ಕಾಪಟ್ಟೆ ಕಿತ್ತಾಟ ನಡೆದಿದೆ.
ಬಿಗ್‌ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳ ಲೆಕ್ಕದಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಮನೆಯಿಂದ ಹೊರಹೋಗಿದ್ದಾರೆ. ಆದರೆ ಅಸಲಿಗೆ ರಕ್ಷಿತಾ, ಧ್ರುವಂತ್ ಹೋಗಿರುವುದು ಸೀಕ್ರೆಟ್ ರೂಂಗೆ. ಅಲ್ಲಿದ್ದುಕ್ಕೊಂಡೇ ಮನೆಯವರ ಆಟವನ್ನ ಲೈವ್‌ನಲ್ಲಿ ಧ್ರುವಂತ್ ರಕ್ಷಿತಾ ನೋಡುತ್ತಿದ್ದಾರೆ. ಒಂದೇ ಮನೆಯಲ್ಲಿರುವ ರಕ್ಷಿತಾ ಮೊದಲೇ ಹಾವು ಮುಂಗುಸಿಯAತಿದ್ದವರು. ಎಲ್ಲರ ನಡುವೆ ಇದ್ದಾಗಲೇ ಪರಸ್ಪರ ಭಾರಿ ಕಿತ್ತಾಟ ಮಾಡಿಕೊಳ್ಳುತ್ತಿದ್ದವರು. ಇದೀಗ ಒಟ್ಟಿಗೆ ಇರುವ ಧ್ರುವಂತ್ ರಕ್ಷಿತಾ ಪ್ರತಿ ವಿಚಾರಕ್ಕೂ ಪರಸ್ಪರ ಕಿತ್ತಾಡುತ್ತಿದ್ದಾರೆ.
