ಉದಯವಾಹಿನಿ, ಕಲಬುರಗಿ: ಉಪನ್ಯಾಸಕಿ ಒಬ್ಬರಿಗೆ ಚಾಕು ತೋರಿಸಿ ಹೆದರಿಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು, ಮೊಬೈಲ್ ದೋಚಿಕೊಂಡು ಹೋದ ಘಟನೆ ನಗರ ಹೊರವಲಯದ ನಾಗನಹಳ್ಳಿ ಆಶ್ರಯ ಕಾಲೋನಿ ಹತ್ತಿರ ನಡೆದಿದೆ.
ನಗರದ ಬಿ.ಎಡ್. ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿರುವ ಶಿವಮ್ಮ ಕಡ್ಲಾ (40) ಎಂಬುವವರಿಗೆ ಹೆದರಿಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು, ಮೊಬೈಲ್ ದೋಚಿಕೊಂಡು ಹೋಗಲಾಗಿದ್ದು, ಅವರು ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಉಪನ್ಯಾಸಕಿ ಶಿವಮ್ಮ ಕಡ್ಲಾ ಅವರು ಮಲ್ಲಿಕಾರ್ಜುನ ಹೊಸಮನಿ ಎಂಬುವವರ ಜೊತೆ ಬೈಕ್ ಮೇಲೆ ನಾಗನಹಳ್ಳಿ ಆಶ್ರಯ ಕಾಲೋನಿ ಹತ್ತಿರವಿರುವ ಜಿಡಿಎ ಪ್ಲಾಟ್‍ಗಳನ್ನು ನೋಡಲು ಹೋಗಿದ್ದಾರೆ. ಪ್ಲಾಟ್‍ಗಳನ್ನು ನೋಡಿ ಸಾಯಂಕಾಲ ಮರಳಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ನಾಗನಹಳ್ಳಿ ಆಶ್ರಯ ಕಾಲೋನಿ ಹತ್ತಿರ ಎದರುಗಡೆಯಿಂದ ಬೈಕ್ ಮೇಲೆ ಬಂದ 20 ರಿಂದ 30 ವರ್ಷ ವಯಸ್ಸಿನ ಮೂವರು ಅಪರಿಚಿತ ಯುವಕರು ಅವರನ್ನು ತಡೆದು ಚಾಕು ತೋರಿಸಿ ಹೆದರಿಸಿ ಶಿವಮ್ಮ ಅವರ ಕೊರಳಲ್ಲಿದ್ದ 60 ಸಾವಿರ ರೂ.ಮೌಲ್ಯದ 12 ಗ್ರಾಂ.ಬಂಗಾರದ ಲಾಕೇಟ್, 16 ಸಾವಿರ ರೂ.ಮೌಲ್ಯದ 2.5 ಗ್ರಾಂ.ಕಿವಿಯೋಲೆ, 16 ಸಾವಿರ ರೂ.ಮೌಲ್ಯದ ಸ್ಯಾಮಸಂಗ್ ಮೊಬೈಲ್, 8 ಸಾವಿರ ರೂ.ನಗದು ಮತ್ತು 2 ಸಾವಿರ ರೂ.ಮೌಲ್ಯದ ಎಚ್‍ಎಮ್‍ಟಿ ಲೇಡೀಸ್ ವಾಚ್ ಕಸಿದುಕೊಂಡಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನ ಹೊಸಮನಿ ಅವರ ಬಳಿ ಇದ್ದ 15 ಸಾವಿರ ರೂ.ಮೌಲ್ಯದ ವಿಪೋ ವಾಯ್ 21 ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!