ಉದಯವಾಹಿನಿ, ಪಾಕಿಸ್ತಾನದ ಯುವ ಬ್ಯಾಟರ್ ಸಮೀರ್ ಮಿನ್ಹಾಸ್ ಅಂಡರ್-19 ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಈ ಮೂಲಕ ಸಮೀರ್ ಮಿನ್ಹಾಸ್ ಎಲ್ಲರನ್ನೂ ಬೆರಗುಗೊಳಿಸಿದರು. ದುಬೈನಲ್ಲಿ ನಡೆಯುತ್ತಿರುವ ಭಾರತ (India) ವಿರುದ್ಧದ ಫೈನಲ್ ಪಂದ್ಯದಲ್ಲಿ ಸಮೀರ್ 172 ರನ್ ಗಳಿಸಿ ಇತಿಹಾಸ ನಿರ್ಮಿಸಿದರು. ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸಮೀರ್ ಮಿನ್ಹಾಸ್ ಫೈನಲ್‌ನಲ್ಲಿ ಮಿಂಚಿದರು. ಮಿನ್ಹಾಸ್ ಆರಂಭದಿಂದಲೇ ಭಾರತೀಯ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಮೊದಲು ಅವರು 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಈ ಇನ್ನಿಂಗ್ಸ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಕೇವಲ 71 ಎಸೆತಗಳಲ್ಲಿ ಶತಕವನ್ನಾಗಿ ಪರಿವರ್ತಿಸಿದರು. ಈ ಟೂರ್ನಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ.
ಅಂಡರ್-19 ಏಷ್ಯಾ ಕಪ್‌ನಲ್ಲಿ ಅತ್ಯಂತ ವೇಗದ ಶತಕ ಗಳಿಸಿದವರ ಪಟ್ಟಿಯಲ್ಲಿ ಸಮೀರ್ ಮಿನ್ಹಾಸ್ ಅವರು ಎರಡನೇ ಸ್ಥಾನವನ್ನು ತಲುಪಿದ್ದಾರೆ. ಭಾರತದ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದಾರೆ. 113 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 172 ರನ್ ಗಳಿಸಿದ ನಂತರ ಅವರು ಔಟಾದರು.

13 ವರ್ಷಗಳ ಹಳೆಯ ದಾಖಲೆ ಉಡೀಸ್
ಸಮೀರ್ ಮಿನ್ಹಾಸ್, 2012 ರ ಫೈನಲ್‌ನಲ್ಲಿ ಸಮಿ ಅಸ್ಲಾಮ್ (134 ರನ್) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಈ ದಾಖಲೆಯನ್ನು ದಾಟುತ್ತಿದ್ದಂತೆ, ಅವರ ಇನ್ನಿಂಗ್ಸ್ ಇತಿಹಾಸವಾಯಿತು. ಅಷ್ಟೇ ಅಲ್ಲ, ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮಿನ್ಹಾಸ್ 150 ರನ್‌ಗಳ ನಂತರವೂ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಮುಂದುವರೆಸಿದರು. ದ್ವಿಶತಕದತ್ತ ವೇಗವಾಗಿ ಸಾಗುತ್ತಿದ್ದರು. ಆದಾಗ್ಯೂ, ಭಾರತದ ಬೌಲರ್ ದೀಪೇಶ್ ದೇವೇಂದ್ರ ಅವರ ಎಸೆತದಲ್ಲಿ ಔಟಾಗುವ ಮೂಲಕ ಮಿನ್ಹಾಸ್ 172 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು.
ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಬಿಗ್ ಇನ್ನಿಂಗ್
ಸಮೀರ್ ಮಿನ್ಹಾಸ್ (ಪಾಕಿಸ್ತಾನ) vs ಭಾರತ- 172 ರನ್- 2025
ಸಾಮಿ ಅಸ್ಲಾಂ (ಪಾಕಿಸ್ತಾನ) vs ಭಾರತ- 134 ರನ್​- 2012
ಆಶಿಕುರ್ ರೆಹಮಾನ್ ಶಿಬ್ಲಿ (ಬಾಂಗ್ಲಾದೇಶ) vs ಯುಎಇ- 129 ರನ್- 2023
ಉನ್ಮುಕ್ತ್ ಚಂದ್ (ಭಾರತ) vs ಪಾಕಿಸ್ತಾನ- 121 ರನ್- 2012
ಇಕ್ರಮ್ ಅಲಿ ಖಿಲ್ (ಅಫ್ಘಾನಿಸ್ತಾನ) vs ಪಾಕಿಸ್ತಾನ- 107* ರನ್- 2017

Leave a Reply

Your email address will not be published. Required fields are marked *

error: Content is protected !!