ಉದಯವಾಹಿನಿ, ಐಕಾನಿಕ್ ಸ್ಪೋರ್ಟ್ಸ್ & ಈವೆಂಟ್ಸ್ ಪ್ರಸ್ತುತಪಡಿಸಿದ ಮತ್ತು ಸ್ಪೈಸ್‌ಜೆಟ್ ಪವರ್ಡ್ ಪಾರ್ಟ್ನರ್ ಆಗಿರುವ ವಿಶ್ವ ಟೆನಿಸ್ ಲೀಗ್ (ಬೆಂಗಳೂರಿನಲ್ಲಿ ಶನಿವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಶನಿವಾರ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಎಒಎಸ್‌ ಈಗಲ್ಸ್‌ ತಂಡವನ್ನು ಮಣಿಸಿ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ತಂಡ, 2025ರ ವಿಶ್ವ ಟೆನಿಸ್ ಲೀಗ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಕಪಿಲ್‌ ದೇವ್ ಹಾಗೂ ಕೆ.ಎಲ್. ರಾಹುಲ್ ಸೇರಿದಂತೆ ಕ್ರಿಕೆಟ್ ದಿಗ್ಗಜರ ಸಮ್ಮುಖದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ತಂಡವು, ಎಒಎಸ್‌ ಈಗಲ್ಸ್ ವಿರುದ್ಧ 22-19 ಅಂತರದಲ್ಲಿ ಜಯ ಸಾಧಿಸಿ ತನ್ನ ಮೊದಲ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಆವೃತ್ತಿಯಲ್ಲಿ ಧಕ್ಷಿಣೇಶ್ವರ್ ಸುರೇಶ್ ತಮ್ಮ ಅದ್ಭುತ ಪ್ರದರ್ಶನದಿಂದ ಗಮನ ಸೆಳೆದರು. 6 ಅಡಿ 5 ಇಂಚು ಎತ್ತರದ ಶಕ್ತಿಶಾಲಿ ಸರ್ವರ್ ಆಗಿರುವ ಸುರೇಶ್, ಡಾನಿಲ್ ಮೆಡ್ವೆಡೆವ್ ಸೇರಿದಂತೆ ಶ್ರೇಷ್ಠ ಆಟಗಾರರನ್ನು ಮಣಿಸುವ ಮೂಲಕ ದೊಡ್ಡ ವೇದಿಕೆಗೆ ತಕ್ಕ ಆಟಗಾರನೆಂಬುದನ್ನು ಸಾಬೀತುಪಡಿಸಿದರು. ಅಮೆರಿಕನ್ ಕಾಲೇಜ್ ಟೆನಿಸ್ ಮಾರ್ಗವನ್ನು ಆಯ್ದುಕೊಂಡಿರುವ 25 ವರ್ಷದ ಸುರೇಶ್, ಪ್ರಸ್ತುತ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ. ಫೈನಲ್‌ನಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಗುಂಪು ಹಂತದಲ್ಲಿ ಸುಮಿತ್ ನಾಗಲ್ ಎದುರಿಸಿದ ಸೋಲಿಗೆ ಪ್ರತೀಕಾರ ತೀರಿಸಿ, ನಿರ್ಣಾಯಕ ಪುರುಷರ ಸಿಂಗಲ್ಸ್ ಪಂದ್ಯವನ್ನು 7-6 ಅಂತರದಲ್ಲಿ ಗೆದ್ದರು.

Leave a Reply

Your email address will not be published. Required fields are marked *

error: Content is protected !!