ಉದಯವಾಹಿನಿ , ಡಿ. 25ಕ್ಕೆ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ವರ್ಲ್ಡ್‌ವೈಡ್ ರಿಲೀಸ್ ಆಗ್ತಿದೆ. ಆದ್ರೆ ರಿಲೀಸ್‌ಗೂ ಮುನ್ನವೇ ಮಾರ್ಕ್ ಫುಲ್ ಸೌಂಡ್ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಮಾತುಗಳು, ಇಡೀ ಸ್ಯಾಂಡಲ್‌ವುಡ್‌ಗೆ ಕಿಚ್ಚುಹಚ್ಚಿದೆ.
ಹುಬ್ಬಳಿಯ ಬೃಹತ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚನ ಮಾತಿಗಾಗಿ ಎಲ್ಲರೂ ಕಾದಿದ್ದರು. ಸುದೀಪ್ ಆಡಿದ ಒಂದು ಮಾತು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರೋಕ್ಷವಾಗಿ ಫ್ಯಾನ್ಸ್‌ವಾರ್ ಮಾತಿನ ಯುದ್ಧಭೂಮಿಯಾಗಿ ಬದಲಾಗಿದೆ. ʻಯುದ್ಧಕ್ಕೆ ಸಿದ್ಧ..ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧʼ ಎಂದಿದ್ದು, ಫ್ಯಾನ್ಸ್ ಫೈಟ್‌ನಲ್ಲಿ ಕಿಚ್ಚನ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರರಂಗದಲ್ಲಿ ಫ್ಯಾನ್ ವಾರ್ ಜೋರಾಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದು ಎಂದು ಚರ್ಚೆ ಶುರುವಾಗಿದೆ.
ಸುದೀಪ್ ಏಟು.. ವಿಜಯಲಕ್ಷ್ಮಿ ತಿರುಗೇಟು: ಸುದೀಪ್ ಹೇಳಿಕೆ ಪೈರಸಿ ಮಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟಂತಿದ್ದರೂ ಅದು ದರ್ಶನ್ ಫ್ಯಾನ್ಸನ್ನೇ ಉದ್ದೇಶಿಸಿ ಹೇಳಿದ್ರಾ ಅನ್ನೋ ವಾದ ಶುರುವಾಗಿದೆ. ಕಿಚ್ಚನ ಯುದ್ಧದ ಮಾತಿಗೆ ನಾನಾ ಆಯಾಮ ಪಡೆದುಕೊಂಡಿದೆ. ಇದಕ್ಕೆ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸುದೀಪ್ ಮಾತಿಗೆ ಕೌಂಟ್ರ ಕೊಟ್ಟಿದ್ದು ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ಹುಟ್ಟುಹಾಕಿವೆ.
