ಉದಯವಾಹಿನಿ , ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ರಿಲೀಸ್‌ ಆಗಿ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ದರ್ಶನ್ ಜೈಲಿನಲ್ಲಿ ಇರುವಾಗ ರಿಲೀಸ್ ಆಗಿರುವ 2ನೇ ಸಿನಿಮಾ ಇದಾಗಿದೆ. ಹೀಗಾಗಿ ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋದಕ್ಕೆ ಸಿನಿ ಮಂದಿ ತುದಿಗಾಲಲ್ಲಿ ನಿಂತಿದ್ರು. ಇತ್ತ ದರ್ಶನ್ ಅಭಿಮಾನಿಗಳು ಸಿನಿಮಾವನ್ನ ಗೆಲ್ಲಿಸುವ ಪಣತೊಟ್ಟಿದ್ದರು. ಆದ್ರೆ ಪೈರಸಿ ಕಾಟ ಡೆವಿಲ್‌ ಸಕ್ಸಸ್‌ಗೆ ಸ್ವಲ್ಪ ಪೆಟ್ಟುಕೊಟ್ಟಿದೆ.

ಹೌದು. ಇಡೀ ಚಿತ್ರರಂಗಕ್ಕೆ ಇಂದು ದೊಡ್ಡ ಸವಾಲಾಗಿರೋದು ಪೈರಸಿ ಎಂಬ ಭೂತ. ಡೆವಿಲ್‌ ಸಿನಿಮಾ ಕೂಡ ಇದಕ್ಕೆ ಹೊರತಾಗಿಲ್ಲ. ಸದ್ಯ ದರ್ಶನ್‌ ಫ್ಯಾನ್ಸ್‌ ಮತ್ತು ಕಿಚ್ಚ ಸುದೀಪ್‌ ನಡುವಿನ ಟಾಕ್‌ ವಾರ್‌ ಮಧ್ಯೆ ಡೆವಿಲ್‌ ಚಿತ್ರತಂಡ ಈ ಪೈರಸಿ ಕುರಿತು ಪೋಸ್ಟ್‌ವೊಂದನ್ನ ಹಂಚಿಕೊಂಡಿದೆ. ಪೈರಸಿ ಇಂದು ವೈರಸ್‌ನಂತೆ ಹಬ್ಬುತ್ತಿದೆ. ಈವರೆಗೂ 10,500 ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನ ಡಿಲೀಟ್‌ ಮಾಡುವ ಕೆಲಸ ಆಗಿದೆ. ದಯವಿಟ್ಟು ಯಾರೂ ಪೈರಸಿ ಮಾಡಬೇಡಿ, ಸಿನಿಮಾವನ್ನ ಥಿಯೇಟರ್‌ನಲ್ಲೇ ನೋಡಿ ಅಂತ ಡೆವಿಲ್‌ ಚಿತ್ರತಂಡ ಮನವಿ ಮಾಡಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟಿಗೆ ಪೈರಸಿ ಎದುರಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.
ಡೆವಿಲ್’ ನಿರೀಕ್ಷೆ ಮಾಡಿದಂತೆ ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಂಡಿತ್ತು. ಮೊದಲ 4 ದಿನಗಳು ಸಿನಿಮಾದ ಕಲೆಕ್ಷನ್ ಕೋಟಿಗಳ ಲೆಕ್ಕದಲ್ಲಿಯೇ ಬಾಚಿಕೊಂಡಿತ್ತು. ಆದ್ರೆ 5ನೇ ದಿನದಿಂದ ‘ಡೆವಿಲ್’ ಬಾಕ್ಸಾಫೀಸ್‌ ಕಲೆಕ್ಷನ್‌ ಕುಸಿದಿತ್ತು. ಆದ್ರೆ ಮತ್ತೆ ಧೂಳೆಸುತ್ತಿರುವ ‌ʻಡೆವಿಲ್ʼ ಕಲೆಕ್ಷನ್‌ನಲ್ಲೂ ಸುಧಾರಿಸಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *

error: Content is protected !!