ಉದಯವಾಹಿನಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪಿಸಿದ ಸಿನಿಮಾ ಕೆಜಿಎಫ್ ಚಾಪ್ಟರ್-1 ತೆರೆಕಂಡು ಇಂದಿಗೆ ಏಳು ವರ್ಷ ತುಂಬಿದೆ. ಈ ಸುದ್ದಿಯನ್ನ ಹೊಂಬಾಳೆ ಫಿಲಂಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಏಳು ವರ್ಷದ ಹಿಂದೆ ಈ ಸಿನಿಮಾ ಬಿಡುಗೆಯಾಗುವ ಸಂದರ್ಭ ಹೇಗಿತ್ತು..? ಆ ಸಿನಿಮಾ ತೆರೆಕಂಡ ಬಳಿಕ ಕನ್ನಡ ಇಂಡಸ್ಟ್ರಿಯ ಲೆವೆಲ್ ಹೇಗೆ ಬದಲಾಯ್ತು ಅನ್ನೋದು ಪ್ರತಿಯೊಬ್ರಿಗೂ ಗೊತ್ತು.
ರಾಕಿಂಗ್‌ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್-1 ಸಿನಿಮಾ ಕೇವಲ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಹಲವಾರು ದಾಖಲೆಗಳು ಪುಡಿಗಟ್ಟಿ ಮಾದರಿಯಾದ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರವಿ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಸಿನಿಮಾ ಟ್ರೈಲರ್ ಹಾಡುಗಳಿಗಿಂತ ಒಂದೆಜ್ಜೆ ಮುಂದಿತ್ತು. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿತ್ತು.

2018ರ ಡಿಸೆಂಬರ್ 21ರಂದು ತೆರೆಕಂಡ ಕೆಜಿಎಫ್ ಸಿನಿಮಾ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು. ಸದ್ಯ ಕೆಜಿಎಫ್ ಸಿನಿಮಾ 7 ವರ್ಷದ ಸಂಭ್ರಮದಲ್ಲಿದೆ. ರಾಕಿಂಗ್‌ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾವನ್ನ ಅವ್ರ ಅಭಿಮಾನಿಗಳಿಗೆ ದರ್ಶನ ಮಾಡಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 2026ರ ಮಾರ್ಚ್ 19ರಂದು ಟಾಕ್ಸಿಕ್ ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿ ನಿಂತಿದೆ.

Leave a Reply

Your email address will not be published. Required fields are marked *

error: Content is protected !!