ಉದಯವಾಹಿನಿ,ಹುಳಿಯಾರು: ಹಂದನಕೆರೆ ಹೋಬಳಿಯ ಮತ್ತಿಘಟ್ಟ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ನಗೀನಾಬೀ ಅವರು ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.
ಒಟ್ಟು 14 ಸದಸ್ಯರಿರುವ ಈ ಪಂಚಾಯ್ತಿಯ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನೆಡೆಯಿತು. ಎಸ್‌ಸಿಗೆ ಮೀಸಲಾಗಿದ್ದ ಈ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಧರ್ ಮತ್ತು ಕಮಲಮ್ಮ ಇಬ್ಬರು ಸ್ಪರ್ಧಿಸಿದ್ದರು. ಶಶಿಧರ್ ಅವರಿಗೆ 9 ಮತಗಳು ಮತ್ತು ಕಮಲಮ್ಮಗೆ 5 ಮತಗಳು ಲಭಿಸುವ ಮೂಲಕ ಉಪಾಧ್ಯಕ್ಷರಾಗಿ ಶಶಿಧರ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಾಪಂ ಇಒ ವಸಂತಕುಮಾರ್ ಕರ್ತವ್ಯ ನಿರ್ವಹಿಸಿದ್ದರು. ಪಿಡಿಓ ಸಿದ್ಧರಾಮಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!