
ಉದಯವಾಹಿನಿ,ಪೀಣ್ಯ ದಾಸರಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ನೆರ ಅವರವರಿಗೆ ಸಿಗುವ ದೃಷ್ಟಿಯಿಂದ ಅಬ್ಬಿಗೆರೆಯಲ್ಲಿ ನೂತನ ಬೆಂಗಳೂರು ಒನ್ ಕೇಂದ್ರ ಸ್ಥಾಪಿಸಿ ಅಕ್ಕ ಪಕ್ಕದ ಗ್ರಾಮಗಳಾದ ಕೆರೆಗುಡ್ಡದಹಳ್ಳಿ, ಕಮ್ಮಗೊಂಡನಹಳ್ಳಿ, ಲಕ್ಷ್ಮೀಪುರ ಅಬ್ಬಿಗೆರೆ ಸಮಸ್ತ ಜನತೆಗೆ ಅನುಕೂಲಕ್ಕಾಗಿ ಬೆಂಗಳೂರು ಒನ್ ಕೇಂದ್ರ ಉದ್ಘಾಟನೆ ಮಾಡಲಾಗಿದೆ ಎಂದು ಶಾಸಕ ಎಸ್ ಮುನಿರಾಜು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯ ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಕೆ ನಾಗಭೂಷಣ್ ಮಾತನಾಡಿ ಕ್ಷೇತ್ರದ ವಾರ್ಡ ಗಳಲ್ಲಿ ಅತಿ ದೊಡ್ಡ ಶೆಟ್ಟಿಹಳ್ಳಿ ಎಂದರೆ ತಪ್ಪಾಗಲಾರದು ಹಲವು ವರ್ಷಗಳಿಂದ ಬೆಂಗಳೂರು ಒನ್ ಸ್ಥಾಪಿಸಲು ನಿರಂತರವಾಗಿ ಶತ ಪ್ರಯತ್ನ ಮಾಡಿದ್ದು ಆದರೆ ಮಾಜಿ ಶಾಸಕರು ಬೇರೆದವರ ಮಾತು ಕೇಳಿ ಬೆಂಗಳೂರು ಒನ್ ಕೇಂದ್ರ ಸ್ಥಾಪಿಸಲು ಹಿಂದೇಟು ಹಾಕಿದರು ಆದರೆ ಈಗಿನ ಶಾಸಕ ಎಸ್ ಮುನಿರಾಜು ಅವರ ಸಹಕಾರದಿಂದ ಅಬ್ಬಿಗೆರೆಯಲ್ಲಿ ಬೆಂಗಳೂರು ಒನ್ ಸ್ಥಾಪನೆ ಆಗಿದ್ದು ಸಂತಸ ತಂದಿದೆ ಎಂದು ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಅಬ್ಬಿಗೆರೆ ರಾಜಣ್ಣ, ಬಿಜೆಪಿ ಮಾಜಿ ಅಧ್ಯಕ್ಷ ಅಬ್ಬಿಗೆರೆ ಲೋಕೇಶ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ರಮೇಶ್ ಯಾದವ್, ಜಬ್ಬರ್, ಮಂಜುನಾಥ್, ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ ಸೇರಿದಂತೆ ಮುಂತಾದವರು ಇದ್ದರು.
