ಉದಯವಾಹಿನಿ,ಚಿಂಚೋಳಿ: ಭವ್ಯ ಭಾರತದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ತಾವು ಮಕ್ಕಳಿಗೆ ನೀಡುವ‌ ವಿದ್ಯೆ ಶಿಕ್ಷಣ ಒಂದೊಂದು ಅಕ್ಷರ ಶಿಸ್ತು ಸ್ವಯಂ ಅಭಿಮಾನ ಈ ದೇಶದ ಪ್ರಗತಿಗೆ ನಾಂದಿಯಾಗುತ್ತದೆ ಎಂದು ಸೇವಾದಳ ರಾಷ್ಟ್ರೀಯ ಸಂಚಾಲಕ ಲಕ್ಷ್ಮಣ ಆವುಂಟಿ ಹೇಳಿದರು.
ಪಟ್ಟಣದ ಚಂದಾಪೂರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಲಬುರ್ಗಿ ಭಾರತ ಸೇವಾದಳ ತಾಲೂಕಾ ಸಮಿತಿ ಮತ್ತು ಕ್ಷೇತ್ರ  ಶಿಕ್ಷಣಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಭಾರತ ಸೇವಾದಳ ಸಂಸ್ಥಾಪಕ ಪದ್ಮಭೂಷಣ ಡಾ.ನಾ ಸು ಹರಡಿಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಗಾರವನ್ನು ಉಧ್ಘಾಟಿಸಿ ಮಾತನಾಡಿದ ಅವರು,ಇಂದಿನ ವಿದ್ಯಾರ್ಥಿಗಳು ಮುಂದಿನ ಭವ್ಯ ಭಾರತದ ಮಹಾನ ವ್ಯಕ್ತಗಳಾಗಿ,ನಾಗರಿಕರಾಗಿ  ಭಾರತದ ಭವಿಷ್ಯ ರೂಪಿಸಲು ಪ್ರತಿಯೊಬ್ಬ ಶಿಕ್ಷಕರ ಶ್ರಮ ಸೇವೆ ಅತ್ಯಮೂಲ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಅಭಿಮಾನ ನಮ್ಮ ರಾಷ್ಟ್ರ ದ್ವಜ ಹಾಗೂ ರಾಷ್ಟ್ರಗೀತೆಯ ಮಹತ್ವ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದು ಶಿಬಿರದಲ್ಲಿ ಭಾಗವಹಿಸಿದ‌ ಎಲ್ಲಾ ಶಿಕ್ಷಕರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ,ಶಾಲೆಯ  ಮುಖ್ಯೋಪಾಧ್ಯಾಯ ದೇವಿದಾಸ ರಾಠೋಡ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್,ದೈಹಿಕ ಶಿಕ್ಷಣಾಧಿಕಾರಿ ನಾಗೆಂದ್ರಪ್ಪಾ,ದೈಹಿಕ ಶಿಕ್ಷಕ ಶಾಮರಾವ ಮೋಘಾ,ನಾರಾಯಣರೆಡ್ಡಿ ,ರಾಜು ಮುಸ್ತಾರಿ,ಮಲ್ಲಿಕಾರ್ಜುನ ನೆಲ್ಲಿ ಸ್ವಾಗತಿಸಿದರು,ಕಾರ್ಯದರ್ಶಿ ರಾಜೇಂದ್ರ ಪ್ರಸಾದ ವಂದಿಸಿದರು,ಶಿಕ್ಷಕ ಭೀಮರಾವ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!