
ಉದಯವಾಹಿನಿ,ಶಿಡ್ಲಘಟ್ಟ: ನುಸಿ ಪೀಡಿತ ಹಿಪ್ಪು ನೇರಳೆ ಸೊಪ್ಪಿಗೆ ಆರಂಭದಲ್ಲಿ ಮೊದಲು ನೀರನ್ನು ಎಲೆಯ ಕೆಳಭಾಗದಿಂದ ಸಿಂಪಡಿಸಬೇಕು ಆಗ ಅರ್ಧದಷ್ಟು ನುಸಿಯು ಕೆಳಗೆ ಉದುರಿ ಹೋಗುತ್ತದೆ ಎಂದು ಡಾ. ಕೆ ಎಸ್ ವಿನೋದ ಅವರು ತಿಳಿಸಿದರು. ನಗರದ ರೇಷ್ಮೆ ಬಿತ್ತನೆ ಕೋಠಿ ಕಾರ್ಯಾಲಯದಲ್ಲಿ ಹಿಪ್ಪು ನೇರಳೆ ಮತ್ತು ಕೀಟ ನಿರ್ವಹಣೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಪ್ಪು ನೇರಳೆ ಕಡ್ಡಿಗಳ ನಡುವಿನ ಸಾಲಿನ ಅಂತರ ಹಾಗೂ ಕಡ್ಡಿಯಿಂದ ಕಡ್ಡಿಯ ನಡುವಿನ ಅಂತರ ಹೆಚ್ಚಿರಬೇಕು ಇದರಿಂದ ಸಾಕಷ್ಟು ಗಾಳಿ ಬೆಳಕು ಬಿಸಿಲಿನ ಕಿರಣಗಳು ನಿಯಂತ್ರಣಕ್ಕೆ ನೆರವಾಗುತ್ತದೆ. ಅಂತರ ಹೆಚ್ಚುವುದರಿಂದ ಇಳುವರಿ ಕಡಿಮೆ ಆಗುತ್ತದೆ ಎಂಬ ಭಯ ನಿಮಗೆ ಬೇಡ. ಅಂತರ ಹೆಚ್ಚಿಸಿ ನಾಟಿ ಮಾಡುವುದರಿಂದ ಸಾಮಾನ್ಯ ಪದ್ಧತಿಗಿಂತಲೂ ಹೆಚ್ಚು ಇಳುವರಿಯ ಸೊಪ್ಪನ್ನು ಬೆಳೆಯಬಹುದು. ಈಗಾಗಲೇ ಅದು ಸಾಕಷ್ಟು ರೈತರು ಪ್ರಯೋಗ ನಡೆಸಿದ್ದು,ರೈತರಿಗೆ ಫಲ ನೀಡಿದೆ ಎಂದು ಹೇಳಿದರು.ರೈತರಿಗೆ ನುಸಿ ಪೀಡೆ ಹಾಗೂ ಕೀಟ ನಿರ್ವಹಣೆಯ ಬಗ್ಗೆ ಪರದೆಯ ಮೇಲೆ ವಿಡಿಯೋ ಚಿತ್ರವನ್ನು ತೋರಿಸಿ ರೈತರಿಗೆ ಅರಿವು ಮೂಡಿಸಿದರು.ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಗೌಡ ರೇಷ್ಮೆ ಉಪನಿರ್ದೇಶಕ ಡಿ ಎಂ ಆಂಜನೇಯ ಗೌಡ, ಮದನ್ ಗೋಪಾಲರೆಡ್ಡಿ ರೇಷ್ಮೆ ಸಹಾಯಕ ನಿರ್ದೇಶಕ ಕೆ ತಿಮ್ಮರಾಜು ರೈತ ಮುಖಂಡರಾದ ಗೋಪಾಲಗೌಡ ಹಿತ್ತಲಹಳ್ಳಿ ಸುರೇಶ್,ತಾದೂರು ಮಂಜುನಾಥ್, ಗೋಪಾಲಗೌಡ,ಪ್ರತೀಶ್, ಹಾಗೂ ರೈತರು ಇದ್ದರು.
