ಉದಯವಾಹಿನಿ, ಬಾಲಿವುಡ್‌ನ ಸ್ಟೈ ದ್ರಿಲ್ಲರ್ ಸಿನಿಮಾ ‘ಧುರಂಧರ್ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಗಳಿಸಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿದ್ದು, ಈಗಾಗಲೇ ₹500 ಕೋಟಿಗೂ ಹೆಚ್ಚು ವಸೂಲಿ ಮಾಡಿಕೊಂಡಿದೆ. ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ‘ಧುರಂಧರ್’ ತನ್ನದೇ ಸ್ಥಾನವನ್ನು ಗಟ್ಟಿ ಮಾಡಿದೆ.
ಡಿಸೆಂಬರ್ 5ರಂದು ತೆರೆಕಂಡ ಸಿನಿಮಾದ ಮೊದಲ ದಿನ ಹೆಚ್ಚಿನ ನಿರೀಕ್ಷೆಯಿಲ್ಲದೆ ಆರಂಭಗೊಂಡಿದ್ದರೂ ದಿನದಿಂದ ದಿನಕ್ಕೆ ಬಾಕ್ಸ್‌ಆಫೀಸ್‌ನಲ್ಲಿ ಕಲೆಕ್ಷನ್ ಹೆಚ್ಚಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನ ಬಲಿಷ್ಠವಾಗಿದ್ದು, ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದು ವಾಣಿಜ್ಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ನಡುವೆ ‘ಧುರಂಧರ್’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್ ಫಿಕ್ಸ್ ಖರೀದಿಸಿದೆ. ವರದಿಗಳ ಪ್ರಕಾರ, ಒಟಿಟಿ ಹಕ್ಕುಗಳಿಗಾಗಿ ಸುಮಾರು ₹285 ಕೋಟಿ ರೂ. ಗೆ ಒಪ್ಪಂದಗೊಂಡಿದ್ದು, ಇದು ಅಲ್ಲು ಅರ್ಜುನ್ ನಟನೆಯ ‘ಪುಷ್ಪ-2’ ಚಿತ್ರಕ್ಕೆ ನೀಡಿದ ಮೊತ್ತಕ್ಕಿಂತ ಹೆಚ್ಚು ಎನ್ನಲಾಗಿದೆ. ಡಿಜಿಟಲ್ ಹಕ್ಕುಗಳ ವಿಷಯದಲ್ಲೂ ‘ಧುರಂಧರ್’ ಹೊಸ ದಾಖಲೆ ಸ್ಥಾಪಿಸಿದೆ.
